ನ್ಯೂಸ್

ಶ್ರದ್ಧಾ ಭಕ್ತಿಯಿಂದ ನಡೆದ ರಾಮನವಮಿ ಆಚರಣೆ

Haveri - Kariyappa Aralikatti

ಹಾವೇರಿ: ಶ್ರೀ ರಾಮ ನವಮಿಯನ್ನು ನಗರದ ಸೇರಿ ಜಿಲ್ಲಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ನಗರದ ದೇಸಾಯಿಗಲ್ಲಿಯಲ್ಲಿರುವ ಶ್ರೀರಾಮ ಮಂದಿರವನ್ನು ವಿದ್ಯುತ್​ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಾಲಯದ ಮಧ್ಯದಲ್ಲಿ ತೂಗು ಹಾಕಿದ್ದ ತೊಟ್ಟಿಲನ್ನು ವಿಶೇಷ ಹೂವುಗಳಿಂದ ಅಲಂಕರಿಸಲಾಗಿತ್ತು. ಶ್ರೀ ರಾಮನ ಮಹಿಮೆಯನ್ನು ಸಾರುವ ಭಕ್ತಿ ಗೀತೆಗಳು ಕಿವಿಗೆ ಇಂಪನು ಕೊಡುತ್ತಿದ್ದವು. ದೇವಾಲಯದಲ್ಲಿ ಬೆಳಗಿನದಲ್ಲಿ ಅಭಿಷೇಕ ಪಂಚಾಮೃತ ಅಭಿಷೇಕ ಪುಷ್ಪಾಲಂಕಾರ ಹಾಗೂ ವಸ್ತ್ರಲಂಕಾರ ಸೇವೆಗಳು ನಡೆದವು.

ಬೆಳಗ್ಗೆ ಪ್ರಭು ರಾಮನ ತೊಟ್ಟಿಲು ಕಾರ್ಯಕ್ರಮ ಜರಗಿತು. ನಂತರ ಉಪಹಾರ, ಪಲ್ಲಕ್ಕಿ ಮೆರವಣಿಗೆ ನಡೆಯಿತು. ಸಂಜೆ ಮಂಗಳಾರತಿ ಜರುಗಿತು. ಈ ಸಂದರ್ಭದಲ್ಲಿ ಭಕ್ತರ ದಂಡೆ ಹರಿದು ಬಂದಿತ್ತು. ಶ್ರೀರಾಮ, ಸೀತಾ ಹಾಗೂ ಲಕ್ಷ$್ಮಣ ಮೂತಿರ್ಗಳಿಗೆ ತರಾವರಿ ಹೂಗಳಿಂದ ಸಿಂಗರಿಸಲಾಗಿತ್ತು. ತೊಟ್ಟಿಲನ್ನು ಮಲ್ಲಿಗೆ ಕನಕಂಬರ, ಗುಲಾಬಿ, ಸೇವಂತಿ, ಚಂಪಕ ಹೂಗಳಿಂದ ಅಲಂಕಾರಗೊಳಿಸಲಾಗಿತ್ತು.

ದೇವಸ್ಥಾನದ ಸುತ್ತಲೂ ಬಾಳೆಕಂಬ ತೆಂಗಿನ ಗರಿಯಿಂದಲೂ ಸಿಂಗರಿಸಲಾಗಿತ್ತು. ಹಿರಿಯ ಮಹಿಳೆಯರು ಜೋಗುಳದ ಸಾಂಪ್ರದಾಯಿಕ ಗೀತೆಯನ್ನು ಹಾಡಿದರು. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಲ್ಲರೂ ಶ್ರೀ ರಾಮನ ತೊಟ್ಟಿಲು ತೂಗಿ ಭಕ್ತಿ ಭಾವದ ಪರಾಕಾಷ್ಠೆಯಲ್ಲಿ ಮಿಂದೆದ್ದರು.

ರಾಮ ನವಮಿ ಅಂಗವಾಗಿ ದೇವಸ್ಥಾನದಲ್ಲಿ ವಿವಿಧ ಧಾಮಿರ್ಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಭಕ್ತಾದಿಗಳು ಸರಿ ನಿಂತು ಶ್ರೀ ರಾಮನ ದರ್ಶನ ಪಡೆದರು ಹಾಗೂ ವಿಶೇಷ ಪೂಜೆಯನ್ನು ಸಲ್ಲಿಸಿದರು. ಆಗಮಿಸಿದ ಭಕ್ತರಿಗೆ ದೇವಸ್ಥಾನದ ವತಿಉಇಂದ ಪಾನಕ ಕೋಸಂಬರಿ ವಿತರಿಸಲಾಯಿತು.

ದೇವಸ್ಥಾನದ ಮುಖ್ಯಸ್ಥ ಹನುಮಂತನಾಯಕ ಬದಾಮಿ, ಬ್ರಾಹ್ಮಣ ಸಮಾಜದ ಜಿಲ್ಲಾ ಅಧ್ಯಕ್ಷ ವಸಂತ ಮೋಕ್ತಾಲಿ, ರಮೇಶ ಕಡಕೋಳ, ದತ್ತಾತ್ರೆಯ ಕಳ್ಳಿಹಾಳ, ಉದಯ ಕುಲಕಣಿರ್, ಉಮೇಶ ಕಳ್ಳಿಹಾಳ, ರಾಜಣ್ಣ ಪುಣ್ಯವಂತರ, ಉಮೇಶ ಕುಲಕಣಿರ್, ರಮೇಶ ಕುಲಕಣಿರ್ ಹಾಗೂ ಅರ್ಚಕರು ಮತ್ತಿತರರು ಪಾಲ್ಗೊಂಡಿದ್ದರು.