ನ್ಯೂಸ್

ಕಿರು ನಾಟಕ ಸ್ಪರ್ಧೆ ಇಂದು

Dharwada - Vikram Nadiger

ಧಾರವಾಡ: ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪವು ಅ. 16ರಂದು ಸಂಜೆ 5 ಗಂಟೆಗೆ ಸಂಘದ ರಾ.ಹ. ದೇಶಪಾಂಡೆ ಭವನದಲ್ಲಿ ಮಹಿಳೆ ಮತ್ತು ಕಲೆ (ಕಿರುನಾಟಕ ಸ್ಪರ್ಧೆ ಹಾಗೂ ಹಾಡುಗಾರಿಕೆ) ಏರ್ಪಡಿಸಲಾಗಿದೆ.
ಆಕಾಶವಾಣಿ ಹಿರಿಯ ಉದ್ಘೋಷಕಿ ಜಿ. ಸುರೇಖಾ ಸುರೇಶ ಕಾರ್ಯಕ್ರಮ ಉದ್ಘಾಟಿಸುವರು. ವಿದುಷಿ ಸೀತಾ ಛಪ್ಪರ, ಕಲಾವಿದರಾದ ಪ್ರಕಾಶ ಮಲ್ಲಿಗವಾಡ, ಆರತಿ ದೇವಶಿಖಾಮಣಿ ಅತಿಥಿಗಳಾಗಿ ಆಗಮಿಸುವರು. ಪ್ರೊ. ಮಾಲತಿ ಪಟ್ಟಣಶೆಟ್ಟಿ ಉಪಸ್ಥಿತರಿರುವರು. ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು.
ಪ್ರಮಿಳಾ ಜಕ್ಕಣ್ಣವರ ಅವರು ಭಕ್ತೀಗಿತೆ, ಡಾ. ನಿರ್ಮಲಾ ಮತ್ತು ಮಂಗಲಾ ಚಿಗಟೇರಿ ತಂಡ ಭಾವಗೀತೆ, ಮುತ್ತು ಹಿರೇಮಠ ಚಲನಚಿತ್ರ ಗೀತೆ ಹಾಗೂ ಕಸ್ತೂರಿ ಮತ್ತು ಸಂಗಡಿಗರು ಜಾನಪದ ಗೀತೆ ಪ್ರಸ್ತುತಪಡಿಸುವರು. ಮಧ್ಯಾಹ್ನ 3 ಗಂಟೆಗೆ ಕಿರುನಾಟಕ ಸ್ಪರ್ಧೆ ಪ್ರದರ್ಶನವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.