ಬೆಂಗಳೂರು: ಸಂಚಾರ ನಿರ್ಬಂಧದ ನಡುವೆಯೂ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿರುವುದನ್ನು ತಡೆದು ಪ್ರಶ್ನಿಸಿದ್ದಕ್ಕೆ ಪೇದೆ ಮೇಲೆಯೇ ಹಲ್ಲೆ ಮಾಡಿದ್ದ ವ್ಯಕ್ತಿ ಕಾಲಿಗೆ ಸಂಜಯನಗರ ಪೊಲೀಸರು ಗುಂಡು ಹಾರಿಸಿದ್ದಾರೆ.
ಭೂಪಸಂದ್ರದ ನಿವಾಸಿ ತಾಜುದ್ದೀನ್ (25) ಗುಂಡೇಟು ತಿಂದ ಆರೋಪಿ. ಬುಧವಾರ (ಮಾ.25) ಮಧ್ಯಾಹ್ನ 12.30ರಲ್ಲಿ ಕರ್ತವ್ಯ ನಿರತ ಇಬ್ಬರು ಪೇದೆಗಳ ಮೇಲೆ ಹಲ್ಲೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತಾಜುದ್ದೀನ್ (25) ಮತ್ತು ಕುತ್ಬುದ್ದೀನ್ (25) ಎಂಬುವನನ್ನು ಬಂಧಿಸಲಾಗಿತ್ತು.
ತಡರಾತ್ರಿ ಸ್ಥಳ ಮಹಜರು ಮಾಡಲು ಭೂಪಸಂದ್ರದ ಚೆಕ್ ಪೋಸ್ಟ್ಗೆ ಕರೆದೊಯ್ದಾಗ, ಮಹಿಳಾ ಪಿಎಸ್ಐ ರೂಪಾ ಅವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾದ ಸಂಜಯ್ನಗರ ಇನ್ಸ್ಪೆಕ್ಟರ್ ಬಾಲಾಜಿ ಅವರು ಸಿಬ್ಬಂದಿಯ ಆತ್ಮ ರಕ್ಷಣೆಗಾಗಿ ಆರೋಪಿ ಕಾಲಿಗೆ ಒಂದು ಸುತ್ತು ಗುಂಡು ಹಾರಿಸಿ ಬಂಧಿಸಿದ್ದಾರೆ.