ನ್ಯೂಸ್

ವ್ಯಕ್ತಿಯೊಬ್ಬನನ್ನು ಥಳಿಸಿ, ಬಟ್ಟೆ ಹರಿದು ಮೈ ಮೇಲೆ ಮೂತ್ರ ವಿಸರ್ಜನೆ! ವಿಡಿಯೋ ವೈರಲ್... | Urinated

Urinated: ವ್ಯಕ್ತಿಯೊಬ್ಬ ವಿಧವೆಯೊಬ್ಬಳ ಮನೆಗೆ ಹೋಗಿದ್ದಾಗ ಆತನನ್ನು ಥಳಿಸಿ, ವಿವಸ್ತ್ರಗೊಳಿಸಿ,ಮೂತ್ರ ವಿಸರ್ಜನೆ ಮಾಡಿದ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಹೌದು, ಸೆಪ್ಟೆಂಬರ್ 24 ರಂದು ನಡೆದ ಈ ಘಟನೆಯು ಆಘಾತಕಾರಿ ಹಲ್ಲೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆದ ಬಳಿಕ ಬೆಳಕಿಗೆ ಬಂದಿದೆ.

ಘಟನೆ ನಡೆದ ದಿನ, ಮಹಿಳೆ ರಾಜು ಯಾದವ್ ಅವರನ್ನು ತನ್ನ ಮನೆಗೆ ಆಹ್ವಾನಿಸಿದಾಗ, ಆಕೆಯ ಸಂಬಂಧಿಕರು ಹೊಂಚು ಹಾಕಿ ಆತನ ಮೇಲೆ ದಾಳಿ ಮಾಡಿದ್ದರು ಎನ್ನಲಾಗಿದೆ. ಸತ್ಯೇಂದ್ರ ಯಾದವ್, ಪುನೀತ್ ಯಾದವ್, ಜಸ್ವಿಂದ್, ಜಿತೇಂದ್ರ ಮತ್ತು ಸುಮಿತ್ ಯಾದವ್ ಎಂದು ಗುರುತಿಸಲಾದ ಕುಟುಂಬ ಸದಸ್ಯರು ಅವನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ.

ವಿಡಿಯೋದಲ್ಲೇನಿದೆ?

ವ್ಯಕ್ತಿ ಅವನ ತಲೆ ಬೋಳಿಸಿದ್ದಾರೆ. ಬಿಸಿ ಕಬ್ಬಿಣದ ಪ್ಯಾನ್ ಮೇಲೆ ಕೂರಿಸಿ, ನಂತರ ಅವನ ಮುಖದ ಮೇಲೆ ಮೂತ್ರ ವಿಸರ್ಜಿಸುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಸ್ಥಳದಲ್ಲಿದ್ದ ಜನರು ವೀಡಿಯೊವನ್ನು ರೆಕಾರ್ಡ್ ಮಾಡಿದ್ದು, ಅದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಪ್ರಚಾರವಾಗಿದೆ. ಇದೀಗ ದೃಶ್ಯಾವಳಿಗಳನ್ನು ಆಧರಿಸಿ, ಪೊಲೀಸರು ಎಲ್ಲಾ ಐದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.(ಏಜೆನ್ಸೀಸ್​​)