ವಿಮಾನ ಪ್ರಯಾಣದ ವೇಳೆ ಗಣೇಶನ ಚಿತ್ರ ಬಿಡಿಸಿದ ಕಲಾವಿದೆ  
ನ್ಯೂಸ್

ವಿಮಾನ ಕಿಟಕಿ ಮೇಲೆ ಗಣೇಶನ ಚಿತ್ರ ನೋಡಿ ಶಾಕ್; ವೈರಲ್ ವಿಡಿಯೋ ಹಿಂದಿನ ಸತ್ಯ ಬಯಲು! | Ganesha Painting

ವಿಮಾನದಲ್ಲಿ ಕಲಾವಿದೆಯೊಬ್ಬರು ಗಣೇಶನ ಚಿತ್ರ ಬಿಡಿಸಿದ ವಿಡಿಯೋ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದೆ. ಕಿಟಕಿ ಮೇಲೆ ಚಿತ್ರ ಬಿಡಿಸಿಲ್ಲ, ಪಾರದರ್ಶಕ ಹಾಳೆಯ ಮೇಲೆ ಚಿತ್ರ ಬಿಡಿಸಿದ್ದೇನೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Ganesha on airplane window: ಭಾರತೀಯ ಕಲಾವಿದೆಯೊಬ್ಬರು ವಿಮಾನದಲ್ಲಿ ಕುಳಿತು ಗಣೇಶನ ಚಿತ್ರ ಬಿಡಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ಬೆನ್ನಲ್ಲೇ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಕಲಾವಿದೆ ಮಿತಾಲಿ ಸಲುಂಕೆ ವಿಮಾನದ ಕಿಟಕಿ ಬಳಿ ಕುಳಿತು ಮೊದಲು ಗಣೇಶನ ಚಿತ್ರ ಬಿಡಿಸಿ, ನಂತರ ಅದಕ್ಕೆ ಬಣ್ಣ ತುಂಬುವುದನ್ನು ಕಾಣಬಹುದು. ಇದನ್ನು ನೋಡಿದ ಹಲವರು ವಿಮಾನದ ಕಿಟಕಿ ಮೇಲೆಯೇ ಚಿತ್ರ ಬಿಡಿಸಿದ್ದಾರೆ ಎಂದುಕೊಂಡಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ಆಕ್ಷೇಪ

ವಿಡಿಯೋ ವೈರಲ್ ಆಗುತ್ತಿದ್ದಂತೆ ಕೆಲವರು ಮಿತಾಲಿ ಸಲುಂಕೆ ಅವರನ್ನು ಟೀಕಿಸಿದ್ದಾರೆ. ವಿಮಾನದ ಕಿಟಕಿ ಮೇಲೆಯೇ ಚಿತ್ರ ಬಿಡಿಸಿದ್ದಾರಾ, ಇದರಿಂದ ವಿಮಾನದ ಆಸ್ತಿಗೆ ಹಾನಿಯಾಗಿದೆಯಾ ಹಾಗೂ ಸುರಕ್ಷತಾ ನಿಯಮ ಉಲ್ಲಂಘನೆಯಾಗಿದೆಯಾ ಎಂದು ಪ್ರಶ್ನಿಸಿದ್ದಾರೆ. ಕಿಟಕಿಗೆ ಯಾವುದೇ ವಸ್ತು ಅಂಟಿಸುವುದರಿಂದ ಸುರಕ್ಷತೆಗೆ ತೊಂದರೆ ಎಂದೂ ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.

ಕಿಟಕಿ ಮೇಲೆ ಚಿತ್ರ ಬಿಡಿಸಿಲ್ಲ

ಈ ಬಗ್ಗೆ ಆಕ್ಷೇಪಗಳು ಹೆಚ್ಚಾಗುತ್ತಿದ್ದಂತೆ ಮಿತಾಲಿ ಸಲುಂಕೆ ಸ್ಪಷ್ಟನೆ ನೀಡಿದ್ದಾರೆ. ತಾವು ವಿಮಾನದ ಕಿಟಕಿ ಮೇಲೆ ನೇರವಾಗಿ ಚಿತ್ರ ಬಿಡಿಸಿಲ್ಲ. ಪಾರದರ್ಶಕ ಹಾಳೆಯ ಮೇಲೆ ಗಣೇಶನ ಚಿತ್ರ ಬಿಡಿಸಲಾಗಿದೆ ಎಂದು ಅವರು ಇನ್‌ಸ್ಟಾಗ್ರಾಂ ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣನ ಕಪ್ಪು ಲುಕ್‌ಗೆ ಫಿದಾ ಆದ ಫ್ಯಾಷನ್ ಲೋಕ; ಈ ಗೌನ್ ತಯಾರಿಗೆ 350 ಗಂಟೆಯಂತೆ! | Rashmika Mandanna

ತಾವು ಬಿಡಿಸಿದ ಪೂರ್ಣ ಚಿತ್ರವನ್ನು ಕೈಯಲ್ಲಿ ಹಿಡಿದ ಫೋಟೋವನ್ನೂ ಮಿತಾಲಿ ಹಂಚಿಕೊಂಡಿದ್ದಾರೆ. ಇದರಿಂದ ಚಿತ್ರವನ್ನು ವಿಮಾನದ ಕಿಟಕಿ ಮೇಲೆ ಬಿಡಿಸಿರಲಿಲ್ಲ, ಪಾರದರ್ಶಕ ಹಾಳೆಯ ಮೇಲೆ ಚಿತ್ರಿಸಲಾಗಿತ್ತು ಎಂಬುದು ಸ್ಪಷ್ಟವಾಗಿದೆ. (ಏಜೆನ್ಸೀಸ್)