ಸೋಷಿಯಲ್ ಮೀಡಿಯಾ ಸೆನ್ಸೇಷನ್ ಉರ್ಫಿ ಜಾವೇದ್ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿ ಭೂಲ್ ಭುಲೈಯಾ ಚಿತ್ರದ ರಾಜ್‌ಪಾಲ್ ಯಾದವ್ ಅವರ ಲುಕನ್ನ ಮರುಸೃಷ್ಟಿಸಿದ್ದಾರೆ.
ಭೂಲ್ ಭುಲೈಯಾ ಚಿತ್ರದ 'ಛೋಟೆ ಪಂಡಿತ್' ಪಾತ್ರವನ್ನು ಮರುಸೃಷ್ಟಿಸಿದ್ದಕ್ಕಾಗಿ ತನಗೆ ಜೀವ ಬೆದರಿಕೆ ಇದೆ ಎಂದು ಉರ್ಫಿ ಹೇಳಿಕೊಂಡಿದ್ದಾರೆ. ಉರ್ಫಿ ತನಗೆ ಬಂದ ಬೆದರಿಕೆಯ ಸ್ಕ್ರೀನ್ಶಾಟನ್ನ ಸೋಷಿಯಲ್ ಮೀಡಿಯಾಗಳಲ್ಲಿ ಹಂ.ಚಿಕೊಂಡಿದ್ದಾಳೆ.
ಉರ್ಫಿ ಧಾರ್ಮಿಕ ಭಾವನೆಗಳನ್ನು ಉಲ್ಲಂಘಿಸಿರುವ ಕಾರಣಕ್ಕೆ ಕೊಲೆ ಬೆದರಿಕೆಯನ್ನ ಹಾಕಲಾಗಿದೆ.
ಉರ್ಫಿ ಜಾವೇದ್ ತನ್ನ ಹ್ಯಾಲೋವೀನ್ಗಾಗಿ ವಿನ್ಯಾಸಗೊಳಿಸಿದ್ದ ಡ್ರೆಸ್ ಇದಾಗಿದೆ. ಭೂಲ್ ಭುಲೈಯಾ" ಚಿತ್ರದಲ್ಲಿ ರಾಜ್‌ಪಾಲ್ ಯಾದವ್ ಅವರ ಪಾತ್ರವಾದ ಛೋಟೆ ಪಂಡಿತ್‌ನ ಲುಕ್ ಕಾಪಿ ಮಾಡೋಕೆ ಮುಂದಾದ ಉರ್ಫಿ ಜಾವೆದ್, ತನ್ನ ಮುಖಕ್ಕೆ ಕೆಂಪು ಬಣ್ಣ ಬಳಿದುಕೊಂಡಳು, ಕೆಂಪು ಟಾಪ್ ಧರಿಸಿದ್ದಾಳೆ.
ಉರ್ಫಿ ತಾನು ಧರಿಸುವ ಉಡುಪಿನಿಂದಾಗಿ ಕೊಲೆ ಬೆದರಿಕೆಗಳನ್ನ ಎದುರಿಸುತ್ತಿರೋದು ಹೊಸದೇನಲ್ಲ. ಆಕೆಗೆ ಈ ಹಿಂದೆಯೂ ಸಾಕಷ್ಟು ಬೆದರಿಕೆಗಳು ಬಂದಿದ್ದವು. ಡಿಸೆಂಬರ್ 2022 ರಲ್ಲಿ, ಮುಂಬೈನಲ್ಲಿ ವಾಸಿಸುತ್ತಿದ್ದ ನವೀನ್ ಗಿರಿ ಎಂಬ ವ್ಯಕ್ತಿ ಉರ್ಫಿಗೆ ಅತ್ಯಾಚಾರ ಮತ್ತು ಜೀವ ಬೆದರಿಕೆಯನ್ನು ಕಳುಹಿಸಿದ್ದಕ್ಕಾಗಿ ಆತನನ್ನು ಬಂಧಿಸಲಾಗಿತ್ತು. 354 (ಎ) ಲೈಂಗಿಕ ಕಿರುಕುಳ ಹಾಗೂ ಇತರೆ ಸೆಕ್ಷನ್ಗಳ ಅಡಿಯಲ್ಲಿ ಆತನ ಮೇಲೆ ದೂರನ್ನೂ ದಾಖಲಿಸಲಾಗಿತ್ತು.
ಸದ್ಯ ಉರ್ಫಿ ತನ್ನ ವೇಷಭೂಷಣದ ವಿಚಾರಕ್ಕೆ ಮತ್ತೆ ಕೊಲೆ ಬದರಿಕೆ ಎದುರಿಸುವಂಣತಾಗಿದ್ದು, ಸದ್ಯ ಆಕೆ ಈ ಕೊಲೆ ಬೆದರಿಕೆಯ ಸ್ಕ್ರೀನ್ಶಾಟನ್ನ ಎಕ್ಸ್(ಟ್ವಿಟ್ಟರ್)ಖಾತೆಯಲ್ಲಿ ಹಂಚಿಕೊಂಡಿದ್ದಾರೆ.