ನ್ಯೂಸ್

ದೆಹಲಿ ಕೃಷಿಭವನದಲ್ಲಿ ಕರಂದ್ಲಾಜೆ 'ಶೋಭಾ'ಯಮಾನ; ಅಧಿಕಾರ ಚಾಲನೆಗೆ ಹಸಿರು ನಿಶಾನೆ

ಬೆಂಗಳೂರು: ಕೇಂದ್ರ ಸರ್ಕಾರದ ನೂತನ ಸಚಿವ ಸಂಪುಟಕ್ಕೆ ರಾಜ್ಯದಿಂದ ಆಯ್ಕೆಯಾದ ನಾಲ್ವರ ಪೈಕಿ ಒಬ್ಬರಾಗಿರುವ ಸಂಸದೆ ಶೋಭಾ ಕರಂದ್ಲಾಜೆ ಅವರು ಇಂದು ದೆಹಲಿಯ ಕೃಷಿಭವನದಲ್ಲಿ ಶೋಭಾಯಮಾನರಾದರು.

ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆಯಾಗಿ ನಿನ್ನೆಯಷ್ಟೇ ಪ್ರಮಾಣವಚನ ಸ್ವೀಕರಿಸಿದ ಶೋಭಾ ಕರಂದ್ಲಾಜೆಯವರು ದೆಹಲಿಯ ಕೃಷಿಭವನದಲ್ಲಿ ಇಂದು ಪದಗ್ರಹಣ ಮಾಡಿದರು.

ರೈತರ ಸಂಕೇತವಾದ ಹಸಿರು ಶಾಲು ಧರಿಸಿ ಸಚಿವೆ ಶೋಭಾ ಕರಂದ್ಲಾಜೆ ಅವರು ಸಚಿವರ ಕಾರ್ಯಭಾರ ವಹಿಸಿಕೊಂಡಿದ್ದು, ಆ ಮೂಲಕ ನೂತನ ಸಚಿವರ ಅಧಿಕಾರ ಚಾಲನೆಗೆ ಹಸಿರು ನಿಶಾನೆ ಸಿಕ್ಕಂತಾಗಿದೆ.