ನ್ಯೂಸ್

Shivarajkumar: ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟ ಶಿವಣ್ಣ ದಂಪತಿ

ಬೆಂಗಳೂರು: ಸ್ಯಾಂಡಲ್​ವುಡ್ ನಟ ಶಿವರಾಜ್​​ಕುಮಾರ್ ( Shivarajkumar ) ಅವರು ತಿರುಪತಿಗೆ ಭೇಟಿ ಕೊಟ್ಟಿದ್ದು, ಪತ್ನಿ ಸಮೇತರಾಗಿ ತಿಮ್ಮಪ್ಪನಿಗೆ ಮುಡಿ ಕೊಟ್ಟಿದ್ದಾರೆ. ಈ ಕುರಿತಾದ ಫೋಟೋಗಳು ಸೋಶಿಯಲ್​​  ಮೀಡಿಯಾದಲ್ಲಿ ಹರಿದಾಡುತ್ತಿವೆ.

ಶಿವರಾಜ್​ಕುಮಾರ್ ಅವರು ತಮಗಿರೋ ಕೆಲವು ಸಿನಿಮಾ ಕಮಿಟ್​​ಮೆಂಟ್​ಗಳನ್ನು ಪೂರ್ಣಗೊಳಿಸಿದ್ದಾರೆ. ಅದಕ್ಕೆ ಕಾರಣ ಅನಾರೋಗ್ಯ. ಅವರು ಚಿಕಿತ್ಸೆ ಪಡೆಯಲು ವಿದೇಶಕ್ಕೆ ತೆರಳಬೇಕಿದೆ. ಅಮೇರಿಕಾಗೆ ಚಿಕಿತ್ಸೆಗೆ ಹೋಗೊ ಮುನ್ನ ತಿಮ್ಮಪ್ಪನ ಹರಕೆ ತೀರಿಸಿದ ಶಿವಣ್ಣ ದಂಪತಿ ತಿರುಪತಿ ತಿಮ್ಮಪ್ಪನಿಗೆ ಮುಡಿ ನೀಡಿದ್ದಾರೆ.

ಚಿಕಿತ್ಸೆಗಾಗಿ ಶಿವರಾಜ್​ಕುಮಾರ್ ಅಮೆರಿಕಕ್ಕೆ ತೆರಳಲಿದ್ದಾರೆ. ಅವರಿಗೆ ಏನಾಗಿದೆ ಎಂಬ ವಿಚಾರ ಇನ್ನೂ ರಿವೀಲ್ ಮಾಡಿಲ್ಲ. ಅವರು ಚಿಕಿತ್ಸೆ ಪಡೆಯುವುದಕ್ಕೂ ಮೊದಲು ತಿಮ್ಮಪ್ಪನ ಸನ್ನಿಧಾನದಲ್ಲಿದ್ದು ಆಶೀರ್ವಾದ ಪಡೆದಿದ್ದಾರೆ. ಕೆಲವು ತಿಂಗಳು ನಟನೆಯಿಂದ ದೂರ ಇರುವ ನಿರ್ಧಾರಕ್ಕೆ ಬಂದಿದ್ದಾರೆ. ಅವರು ಸಂಪೂರ್ಣ ಚೇತರಿಕೆ ಕಂಡ ಬಳಿಕವೇ ನಟನೆಯತ್ತ ಗಮನ ಹರಿಸಲಿದ್ದಾರೆ.