ಪರಭಾಷೆಯಲ್ಲೂ ಶಿವರಾಜ್ಕುಮಾರ್ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಜೈಲರ್ ಸಿನಿಮಾದ ಬಳಿಕ ಇದೀಗ ಶಿವಣ್ಣನಿಗೆ ಪರಭಾಷೆಯ ಫ್ಯಾನ್ ಫಾಲೋವರ್ಸ್ ಮತ್ತಷ್ಟು ಜಾಸ್ತಿಯಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶಿವರಾಜ್ಕುಮಾರ್, ‘ನನಗೆ ಇದು ನಿಜಕ್ಕೂ ಸರ್ಪ್ರೈಸಿಂಗ್ ಆಗಿತ್ತು. ನಾನು ಮಾಡಿರೋ ಪಾತ್ರಕ್ಕೆ ಈ ಮಟ್ಟದ ಪ್ರತಿಕ್ರಿಯೆ ಸಿಗುತ್ತದೆ ಎಂದುಕೊಂಡಿರಲಿಲ್ಲ’ ಎಂದಿದ್ದಾರೆ.
‘ನನಗೆ ಇದು ನಿಜಕ್ಕೂ ಸರ್ಪ್ರೈಸಿಂಗ್ ಆಗಿತ್ತು. ನಾನು ಮಾಡಿರೋ ಪಾತ್ರಕ್ಕೆ ಈ ಮಟ್ಟದ ಪ್ರತಿಕ್ರಿಯೆ ಸಿಗುತ್ತದೆ ಎಂದುಕೊಂಡಿರಲಿಲ್ಲ. ಕರ್ನಾಟಕದಲ್ಲಿ ನನ್ನನ್ನು ಮೆಚ್ಚಿಕೊಂಡಿದ್ದಾರೆ.
ಅದು ಸಹಜ. ಆದರೆ, ಕೇರಳ, ತಮಿಳುನಾಡು, ಆಂಧ್ರದಲ್ಲಿ ನನ್ನ ಪಾತ್ರಕ್ಕೆ ಈ ಮಟ್ಟದ ಮೆಚ್ಚುಗೆ ಸಿಗುತ್ತಿರುವುದು ಖುಷಿ ನೀಡಿದೆ’ ಎಂದಿದ್ದಾರೆ ಶಿವರಾಜ್ಕುಮಾರ್.
ಶಿವಣ್ಣನ ಫ್ಯಾನ್ ಬೇಸ್ ಇದೀಗ ಮತ್ತೊಂದು ಹಂತಕ್ಕೆ ತಲುಪಿದ್ದು, ರಜನಿಕಾಂತ್, ಸನ್ ಪಿಕ್ಚರ್ಸ್ ಹಾಗೂ ನೆಲ್ಸನ್ ದಿಲೀಪ್ಕುಮಾರ್ಗೆ ಶಿವಣ್ಣ ಧನ್ಯವಾದ ಹೇಳಿದ್ದಾರೆ.