ಕಾರ್ಗಲ್: ಒಂದು ವಾರ ಧುಮ್ಮಿಕ್ಕಿದ ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಭಾನುವಾರ ಕೊಂಚ ಮಟ್ಟಿಗೆ ನೀರು ಕಡಿಮೆಯಾಗಿತ್ತು. ಲಿಂಗನಮಕ್ಕಿ ಅಣೆಕಟ್ಟೆಯಿಂದ ನದಿಗೆ ನೀರು ಬಿಟ್ಟ ಮಾಹಿತಿ ತಿಳಿದ ಪ್ರವಾಸಿಗರು ಫಾಲ್ಸ್ ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಾನುವಾರ ಆಗಮಿಸಿದ್ದರು.
ಶರಾವತಿ ಕಣಿವೆ ವ್ಯಾಪ್ತಿಯಲ್ಲಿ ಮಳೆ ಆರ್ಭಟ ಕಡಿಮೆ ಆಗಿದ್ದರಿಂದ ಲಿಂಗನಮಕ್ಕಿ ಜಲಾಶಯ ಒಳಹರಿವು ತಗ್ಗಿದೆ. ಹಾಗಾಗಿ 3 ಗೇಟ್‌ಗಳ ಮೂಲಕ 4,500 ಕ್ಯೂಸೆಕ್ ನೀರು ಬಿಡಲಾಗಿತ್ತು. ಶನಿವಾರದವರೆಗೂ ಎಲ್ಲ ರೇಡಿಯಲ್ ಗೇಟ್ ತೆರೆದು 52 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿತ್ತು.