ಭದ್ರಾವತಿ ತಾಲೂಕಿನ ಶ್ರೀ ತ್ಯಾಗರಾಜ ಸೇವಾ ಪ್ರತಿಷ್ಠಾನದಿಂದ ಶ್ರೀ ತ್ಯಾಗರಾಜ ಸ್ವಾಮಿಗಳ 79ನೇ ಆರಾಧನಾ ಮಹೋತ್ಸವ ಅಂಗವಾಗಿ ತ್ಯಾಗರಾಜರ ನಗರ ಸಂಕೀರ್ತನೆ ನಡೆಯಿತು. ಮಾಲತಿ ಭಟ್, ಗಾಯತ್ರಿ, ರಾಧಾ ಭಟ್, ಉಮಾ ರಾವ್ ಇತರರಿದ್ದರು.  
ನ್ಯೂಸ್

ತ್ಯಾಗರಾಜಸ್ವಾಮಿ ಆರಾಧನಾ ಮಹೋತ್ಸವ

ಭದ್ರಾವತಿ: ತಾಲೂಕು ಶ್ರೀ ತ್ಯಾಗರಾಜ ಸೇವಾ ಪ್ರತಿಷ್ಠಾನದಿಂದ ನಗರದಲ್ಲಿ ನಾದಬ್ರಹ್ಮ ಸದ್ಗುರು ಶ್ರೀ ತ್ಯಾಗರಾಜಸ್ವಾಮಿಗಳ 79ನೇ ಆರಾಧನಾ ಮಹೋತ್ಸವ ನಡೆಯಿತು.

ಹಳೇನಗರದ ಶ್ರೀ ರಾಮೇಶ್ವರ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಆವರಣದಲ್ಲಿರುವ ಶಂಕರಸಭಾ ಭವನದಲ್ಲಿ ಶ್ರೀ ತ್ಯಾಗರಾಜರ ಭಾವಚಿತ್ರದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಗರ ಸಂಕೀರ್ತನೆ ನಡೆಸಿದರು.

ಉತ್ಸವದ ಅಂಗವಾಗಿ ಪ್ರಾಯಶ್ಚಿತ್ತ ಹೋಮ, ಗಣಪತಿಹೋಮ, ರುದ್ರಹೋಮ, ಶ್ರೀ ಸತ್ಯನಾರಾಯಣ ಪೂಜೆ, ಕನ್ನಿಕಾಪೂಜೆ, ಶ್ರೀ ಸೀತಾರಾಮಚಂದ್ರರಿಗೆ ಪಂಚಾಮೃತ ಅಭಿಷೇಕ, ಶ್ರೀ ತ್ಯಾಗರಾಜರ ಪಂಚರತ್ನ ಕೃತಿ ಗೋಷ್ಠಿ ಗಾಯನ ನಡೆಯಿತು.

ಪ್ರತಿಷ್ಠಾನದ ಮುಖ್ಯಸ್ಥರಾದ ಮಾಲತಿ ಭಟ್, ಗಾಯತ್ರಿ, ರಾಧಾ ಭಟ್, ಉಮಾ ರಾವ್, ವಿಶಾಲಾಕ್ಷಿ, ನಾಗರತ್ನಾ, ಪದ್ಮಿನಿ, ಪುಷ್ಪಾ, ಬಾಲಕೃಷ್ಣ, ಶೆೇಷಾದ್ರಿ, ಸುಬ್ರಹ್ಮಣ್ಯ, ಕೃಷ್ಣಸ್ವಾಮಿ, ಮಂಜುನಾಥ್, ವೆಂಕಟೇಶಮೂರ್ತಿ, ಶ್ರೀಧರಮೂರ್ತಿ, ಚಿದಂಬರ, ಶಂಕರನಾರಾಯಣ, ವಿಶ್ವನಾಥ ಇತರರಿದ್ದರು.