ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರನ್ನು ಶಿಕಾರಿಪುರ ತಾಲೂಕು ಶಾಖೆಯಿಂದ ಸನ್ಮಾನಿಸಲಾಯಿತು. ಎಚ್.ಡಿ.ಮಧುಕೇಶವ, ಬಸವನಗೌಡ, ಮೋಹನ್‌ಕುಮಾರ್, ಸಿ.ಎ.ಹಿರೇಮಠ್, ರಂಗನಾಥ್ ಇತರರಿದ್ದರು.  
ನ್ಯೂಸ್

ಸರ್ಕಾರದ ಯಶಸ್ಸಿನಲ್ಲಿ ನೌಕರರ ಪಾತ್ರ ಮಹತ್ತರ

ಶಿಕಾರಿಪುರ: ಸರ್ಕಾರ, ಜನಪ್ರತಿನಿಧಿಗಳ ಯಶಸ್ಸಿನಲ್ಲಿ ನೌಕರರ ಪಾತ್ರ ಬಹಳ ಮುಖ್ಯ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಹೇಳಿದರು.

ತಾಪಂ ಸಭಾಂಗಣದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘ ಆಯೋಜಿಸಿದ್ದ ಕ್ಯಾಲೆಂಡರ್ ಬಿಡುಗಡೆ, ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುವವರು ಸರ್ಕಾರಿ ನೌಕರರು. ಎಲ್ಲರ ಬೆಂಬಲದಿಂದ ಮತ್ತೊಮ್ಮೆ ರಾಜ್ಯಾಧ್ಯಕ್ಷನಾಗಿದ್ದು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂದು ತಿಳಿಸಿದರು.

2025ಕ್ಕೆ ಎನ್‌ಪಿಎಸ್ ಟು ಒಪಿಎಸ್, 2026ಕ್ಕೆ ಕೇಂದ್ರ ಮಾದರಿ ವೇತನ, ಉಚಿತ ನಗದು ರಹಿತ ಚಿಕಿತ್ಸೆ ಜಾರಿಗಾಗಿ ಹೊಸ ಹೆಜ್ಜೆ ನಮ್ಮ ಸಂಕಲ್ಪವಾಗಿದೆ. ಪ್ರಾಥಮಿಕ, ಪ್ರೌಢ, ಪಿಯು ಶಿಕ್ಷಕ-ಪ್ರಾಧ್ಯಾಪಕರಿಗೆ ಸಂಬಂಧಿಸಿದ ಸಮಸ್ಯೆಗಳು, ಆರೋಗ್ಯ, ಕಂದಾಯ ಇಲಾಖೆ ಸೇರಿ ಎಲ್ಲ ಇಲಾಖೆಗಳ ಸಮಸ್ಯೆಗಳ ಬಗ್ಗೆ, ನೌಕರರು ಸಂಘಟನೆಯ ಮುಂದಿನ ಕಾರ್ಯಕ್ರಮಗಳು, ಹೋರಾಟಗಳ ಬಗ್ಗೆ ಕೈಜೋಡಿಸಬೇಕು. ನೌಕರರ ಪರವಾಗಿ ಸಮಸ್ಯೆಗಳ ನಿವಾರಣೆಗೆ ಹೋರಾಟ ಮಾಡಲು ಸಂಕಲ್ಪ ಮಾಡಿದ್ದೇವೆ ಎಂದರು.

ತಾಲೂಕು ಅಧ್ಯಕ್ಷ ಎಚ್.ಡಿ.ಮಧುಕೇಶವ ಮಾತನಾಡಿ, ಸಿ.ಎಸ್.ಷಡಕ್ಷರಿ ಅವರು ರಾಜ್ಯಾಧ್ಯಕ್ಷರಾಗಿ ಮಾಡಿದ ಕೆಲಸಗಳು ಎರಡನೇ ಬಾರಿ ಪುನರಾಯ್ಕೆಯಾಗಲು ಕಾರಣವಾಗಿದೆ. ಕೇಂದ್ರ ಮಾದರಿ ವೇತನ, ಉಚಿತ ನಗದು ರಹಿತ ಚಿಕಿತ್ಸೆ ಸೇರಿ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿದರು.

ಜಿಲ್ಲಾಧ್ಯಕ್ಷ ಮೋಹನ್‌ಕುಮಾರ್, ಜಿಲ್ಲಾ ಸಂಘದ ಕಾರ್ಯಾಧ್ಯಕ್ಷ ಸಿ.ಎ.ಹಿರೇಮಠ್, ರಾಜ್ಯ ಪರಿಷತ್ ಸದಸ್ಯ ರಂಗನಾಥ್, ಅಶೋಕ್, ಪ್ರೌಢಶಾಲಾ ಸಂಘದ ರಾಜ್ಯಾಧ್ಯಕ್ಷ ಸಿದ್ದಬಸಪ್ಪ, ತಹಸೀಲ್ದಾರ್ ಮಲ್ಲೇಶಪ್ಪ ಪೂಜಾರ್, ಕಾರ್ಯನಿರ್ವಾಹಕ ಅಧಿಕಾರಿ ಎನ್.ಜಿ.ನಾಗರಾಜು, ಬಿಇಒ ಲೋಕೇಶಪ್ಪ, ಬಿಸಿಎಂ ಅಧಿಕಾರಿ ಉಮೇಶ್, ವೀರೇಂದ್ರ, ಸತೀಶ್, ಬಸನಗೌಡ, ರಾಮಚಂದ್ರ ಇತರರಿದ್ದರು.