ಹೊಳೆಹೊನ್ನೂರು ಸಮೀಪದ ಮಾರಶೆಟ್ಟಿಹಳ್ಳಿಯ ಶ್ರೀ ವೀರಭದ್ರೇಶ್ವರ ಸ್ವಾಮಿ ಹಾಗೂ ತಿರುಮಲ ಸ್ವಾಮಿಗೆ ರುದ್ರಾಭಿಷೇಕ, ಕೆಂಡಾರ್ಚನೆ ಹಾಗೂ ರಥೋತ್ಸವ ಜರುಗಿತು. ಶ್ರೀ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ, ಅಶೋಕ ರಾವ್, ಗಣೇಶಪ್ಪ ಇತರರಿದ್ದರು.  
ನ್ಯೂಸ್

ಧರ್ಮಗಳ ಸಾರ ಮನುಕುಲದ ಉದ್ಧಾರ

ಹೊಳೆಹೊನ್ನೂರು: ಎಲ್ಲ ಧರ್ಮಗಳ ಸಾರ ಮನುಕುಲದ ಉದ್ಧಾರವೇ ಆಗಿದೆ ಎಂದು ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ ಹೇಳಿದರು.

ಸಮೀಪದ ಮಾರಶೆಟ್ಟಿಹಳ್ಳಿಯಲ್ಲಿ ಶ್ರೀ ವೀರಭದ್ರಸ್ವಾಮಿ ಹಾಗೂ ತಿರುಮಲ ಸ್ವಾಮಿಗೆ ರುದ್ರಾಭಿಷೇಕ ಕೆಂಡಾರ್ಚನೆ ಹಾಗೂ ರಥೋತ್ಸವದ ಸಾನ್ನಿಧ್ಯವಹಿಸಿ ಮಾತನಾಡಿ, ಮನುಷ್ಯ ಸ್ವಾರ್ಥ ಆಲೋಚನೆಗಳಿಂದ ಹೊರಬರಬೇಕು. ನಿಸ್ವಾರ್ಥ ಸೇವೆಗಳಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದು ತಿಳಿಸಿದರು.

ಕಲಿಯುಗ ಸರಿಯಿಲ್ಲ ಎನ್ನುವುದು ತಪ್ಪು. ಎಲ್ಲ ಕಾಲದಲ್ಲೂ ಒಳ್ಳೆಯವರು-ಕೆಟ್ಟವರು ಇದ್ದರು. ನೀತಿವಂತರಾಗಿ ಧರ್ಮ ಮಾರ್ಗದಲ್ಲಿ ನಡೆದು ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಪರೋಪಕಾರ ಗುಣ ಬೆಳೆಸಿಕೊಂಡಲ್ಲಿ ಬದುಕು ಸುಂದರವಾಗುತ್ತದೆ ಎಂದರು.

ಜೀವನದಲ್ಲಿ ಒತ್ತಡ, ಜಂಜಾಟಗಳಿಂದ ದೂರವಾಗಲು ದಿನದಲ್ಲಿ ಒಂದೆರಡು ಗಂಟೆ ಧ್ಯಾನ, ಪೂಜೆಗಳಿಗೆ ಸಮಯ ಮೀಸಲಿಡಬೇಕು. ಇಷ್ಟಲಿಂಗ ಪೂಜೆ ಮಹತ್ವ ಅರಿಯಬೇಕು. ಯುವಜನರು ಧಾರ್ಮಿಕ ಕಾರ್ಯಕ್ರಮಗಳಿಂದ ವಿಮುಖರಾಗದಂತೆ ನೋಡಿಕೊಳ್ಳಬೇಕು. ಧರ್ಮ ಮಾರ್ಗದಲ್ಲಿ ಗಳಿಸಿದ ಸಂಪತ್ತಿನ ಅಲ್ಪ ಭಾಗವನ್ನು ಒಳ್ಳೆಯ ಕಾರ್ಯಗಳಿಗೆ ವಿನಿಯೋಗಿಸಬೇಕು ಎಂದು ತಿಳಿಸಿದರು.

ಗ್ರಾಮದ ಮುಖಂಡ ಅಶೋಕ್ ರಾವ್, ಗಣೇಶಪ್ಪ, ಓಂಕಾರಮೂರ್ತಿ, ಬಸಪ್ಪ, ರುದ್ರಪ್ಪ, ಮೂರ್ತಪ್ಪ, ಹಾಲಸ್ವಾಮಿ, ವೇದಮೂರ್ತಿ, ಶಿವಯ್ಯ ಶಾಸ್ತ್ರಿ, ಮನೋಹರ ಇತರರಿದ್ದರು.