ಹೊಸನಗರದಲ್ಲಿ ಸುಮೇಧಾ ಅಡಕೆ ಸಹಕಾರ ಸಂಘದ ವಾರ್ಷಿಕ ಸಭೆಯನ್ನು ಅಧ್ಯಕ್ಷ ಕಾಡಳ್ಳಿ ಪ್ರದೀಪ್ ಉದ್ಘಾಟಿಸಿದರು. ರವೀಂದ್ರ, ಅನಂತಮೂರ್ತಿ, ರಮಾನಂದ, ಎನ್.ವಿ.ಪ್ರಕಾಶ್ ಇತರರಿದ್ದರು.  
ನ್ಯೂಸ್

ಸುಮೇಧಾ ಸಂಘಕ್ಕೆ 30 ಲಕ್ಷ ರೂ. ಲಾಭ

ಹೊಸನಗರ: ಸುಮೇಧಾ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘವು 2024-25ನೇ ಸಾಲಿನಲ್ಲಿ 30.5 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಕೆ.ಆರ್.ಪ್ರದೀಪ್ ಕಾಡಳ್ಳಿ ಹೇಳಿದರು.

ಪಟ್ಟಣದ ಗಾಯತ್ರಿ ಮಂದಿರದಲ್ಲಿ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಸಂಸ್ಥೆಯು 33.35 ಲಕ್ಷ ರೂ. ಷೇರು ಬಂಡವಾಳ ಸಂಗ್ರಹಿಸಿದೆ. 4,351 ಷೇರುದಾರರನ್ನು ಹೊಂದಿರುವ ಸಂಸ್ಥೆಯಲ್ಲಿ 17.93 ಕೋಟಿ ರೂ. ಠೇವಣಿ ಸಂಗ್ರಹಿಸಲಾಗಿದೆ. ಲಾಭಾಂಶದಲ್ಲಿ ಷೇರುದಾರರಿಗೆ ಶೇ.10ರಷ್ಟನ್ನು ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಈ ಬಾರಿ ಸಂಸ್ಥೆ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. 24-25ರಲ್ಲಿ 16 ಸಾವಿರ ಚೀಲ ಅಡಿಕೆ ಬಂದಿದ್ದು, ಸಂಸ್ಥೆಗೆ ಬಂದ ಲಾಭದಲ್ಲಿ ವಿವಿಧ ನಿಧಿಗಳಿಗೆ ಹಣ ಒದಗಿಸಲಾಗಿದೆ. ಷೇರುದಾರರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಷೇರುದಾರರ ಹಿತರಕ್ಷಣೆ ಗಮನದಲ್ಲಿಟ್ಟುಕೊಂಡು ಉತ್ತಮ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.

ಸಂಸ್ಥೆಯ ಸಿಇಒ ಎನ್.ವಿ.ಪ್ರಕಾಶ್ ವಾರ್ಷಿಕ ಪ್ರಗತಿ ಬಗ್ಗೆ ಮಾಹಿತಿ ನೀಡಿದರು. ಉಪಾಧ್ಯಕ್ಷ ಅನಂತಮೂರ್ತಿ, ರಮಾನಂದ, ಎಚ್.ಜಿ.ವಿನಾಯಕ, ಉಮೇಶ್, ಸುರೇಶ್, ಸುನೀಲ್‌ಕುಮಾರ್, ಜಿ.ಎ.ಸುಬ್ರಹ್ಮಣ್ಯ, ಸುಬ್ರಹ್ಮಣ್ಯ ಎನ್. ಭಟ್, ಅರವಿಂದ, ಅನಂತಪದ್ಮನಾಭ ಬಾಯರಿ, ಸುಜಾತಾ ದತ್ತಾತ್ರೇಯ ಉಡುಪ, ಜ್ಯೋತಿ ಹರಿಕೃಷ್ಣ, ಶಾಖಾ ವ್ಯವಸ್ಥಾಪಕ ಸುನೀಲ್‌ಕುಮಾರ್ ಉಪಸ್ಥಿತರಿದ್ದರು.