ಹೊಳೆಹೊನ್ನೂರು ಸಮೀಪದ ಜಾವಳ್ಳಿಯ ಜ್ಞಾನದೀಪ ಶಾಲಾ ವಾರ್ಷಿಕೋತ್ಸವದಲ್ಲಿ ಶಿವಮೊಗ್ಗ ಬಿಇಒ ರಮೇಶ್ ಅವರನ್ನು ಸನ್ಮಾನಿಸಲಾಯಿತು. ಶ್ರೀಕಾಂತ್ ಎಂ.ಹೆಗಡೆ, ಬಿ.ಎಲ್.ನೀಲಕಂಠಮೂರ್ತಿ, ಡಿ.ರೂಪಾ, ವಾಣಿ ಕೃಷ್ಣಪ್ರಸಾದ್ ಇತರರಿದ್ದರು. 
ನ್ಯೂಸ್

ನಿರಂತರ ಪರಿಶ್ರಮದಿಂದ ಯಶಸ್ಸು

ಸೋಮಶೇಖರ ಎನ್

ಹೊಳೆಹೊನ್ನೂರು: ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವುದು ಅವಶ್ಯಕ ಎಂದು ಬಿಇಒ ರಮೇಶ್ ಹೇಳಿದರು.

ಸಮೀಪದ ಜಾವಳ್ಳಿಯಲ್ಲಿ ಏರ್ಪಡಿಸಿದ್ದ ಜ್ಞಾನದೀಪ ವಿದ್ಯಾಸಂಸ್ಥೆ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಪಾಲಕರು ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯಬೇಕು. ಮಕ್ಕಳಿಗೆ ಮೌಲ್ಯಗಳನ್ನು ಕಲಿಸಬೇಕು. ಸ್ವಂತ ಆಲೋಚನೆ ಮಾಡುವ ಸಾಮರ್ಥ್ಯ ಬೆಳೆಸಬೇಕು ಎಂದು ತಿಳಿಸಿದರು.

ಶಾಲೆಗಳು ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸುವ ಕೇಂದ್ರವಾಗಬೇಕು. ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೇರೇಪಿಸುವುದು ಪಾಲಕರ ಪ್ರಥಮ ಕರ್ತವ್ಯವಾಗಬೇಕು ಎಂದರು.

ಪ್ರಾಚಾರ್ಯ ಶ್ರೀಕಾಂತ್ ಎಂ.ಹೆಗಡೆ ಮಾತನಾಡಿ, ಮಗುವಿನ ಕಲಿಕೆಯಲ್ಲಿ ಪಾಲಕರ ಹೊಣೆಗಾರಿಕೆ ಮುಖ್ಯವಾಗಿದೆ. ಶಾಲೆಯು ಮೌಲ್ಯಾಧಾರಿತ ಶಿಕ್ಷಣ ನೀಡುತ್ತದೆ. ಶಿಕ್ಷಣ ಪಡೆದ ಮಕ್ಕಳು ಮುಂದಿನ ಗುರಿಗಳನ್ನು ನಿರ್ಧರಿಸಬೇಕು. ಆ ಗುರಿಗೆ ತಕ್ಕಂತೆ ಕಠಿಣ ಪರಿಶ್ರಮದಿಂದ ಮುನ್ನಡೆಯಬೇಕು ಎಂದು ತಿಳಿಸಿದರು.

ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ.ಎಲ್.ನೀಲಕಂಠ ಮೂರ್ತಿ, ಮುಖ್ಯ ಸಂಯೋಜಕಿ ಡಿ.ರೂಪಾ, ಉಪಪ್ರಾಚಾರ್ಯೆ ವಾಣಿ ಕೃಷ್ಣಪ್ರಸಾದ್, ಹಿರಿಯ ಉಪಪ್ರಾಚಾರ್ಯೆ ಡಾ. ರೆಜಿ ಜೋಸ್ೆ, ಗೀತಾ, ಮರಿಯಾ ಪ್ರಿನ್ಸಿ ಇತರರಿದ್ದರು.