ಶಿಕಾರಿಪುರದಲ್ಲಿ ಆಯೋಜಿಸಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಶ್ರೀ ಚನ್ನಬಸವ ಸ್ವಾಮೀಜಿ, ಶಿವಗಿರಿ ಮಠದ ಶ್ರೀ ದಯಾನಂದ ಗಿರಿ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು. ಆನಂದಮೂರ್ತಿ, ಪ್ರಶಾಂತ್, ಪ್ರವೀಣ್, ನಾಗಾರ್ಜುನ್ ಸಿಂಧ್ಯಾ, ಮಂಜುನಾಥ್ ಇತರರಿದ್ದರು.  
ನ್ಯೂಸ್

ಗುರುವಿನ ಮಾರ್ಗದರ್ಶನವಿದ್ದರೆ ಸಾಧನೆ

ಶಿಕಾರಿಪುರ: ಜೀವನದಲ್ಲಿ ಉನ್ನತ ಸಾಧನೆ ಮಾಡಲು ಗುರುವಿನ ಮಾರ್ಗದರ್ಶನ ಅಗತ್ಯ ಎಂದು ಶಿಕಾರಿಪುರ ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ ಹೇಳಿದರು.

ಗುರುಪೂರ್ಣಿಮೆ ನಿಮಿತ್ತ ವಿರಕ್ತಮಠದಲ್ಲಿ ಶಿಕಾರಿಪುರದ ಶ್ರೀ ಸಾಯಿ ಸೇವಾ ಟ್ರಸ್ಟ್ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಎಲ್ಲರಿಗೂ ಗುರುಕಾರುಣ್ಯ ಅವಶ್ಯ. ನಾವು ಯಾವತ್ತೂ ಗುರು ಪರಂಪರೆಯನ್ನು ನಿರ್ಲಕ್ಷಿಸಬಾರದು. ಗುರು ನಮಗೆ ಸದಾ ಮಾರ್ಗದರ್ಶನ ಮಾಡುತ್ತಾರೆ. ಗುರುವಿನ ಅನುಗ್ರಹ ಇದ್ದರೆ ಯಶಸ್ಸು ಸಾಧ್ಯ ಎಂದರು.

ಮಣ್ಣಿನ ಸಂಸ್ಕೃತಿ, ಸಂಸ್ಕಾರ ಮತ್ತು ಪರಂಪರೆಯನ್ನು ನಾವು ಬೆಳೆಸಬೇಕು. ಧರ್ಮವನ್ನು ನಾವು ರಕ್ಷಣೆ ಮಾಡಿದರೆ ಧರ್ಮ ನಮಗೆ ನೆರಳಾಗಿ ನಿಲ್ಲುತ್ತದೆ. ಯಾವ ಕಾರಣಕ್ಕೂ ಧರ್ಮ ಮಾರ್ಗದಿಂದ ವಿಮುಖರಾಗಬಾರದು. ಗುರುಗಳ ಸ್ಮರಣೆ ಸದಾ ಮಾಡಬೇಕು ಎಂದು ತಿಳಿಸಿದರು.

ಶಿಕಾರಿಪುರ ಶಿವಗಿರಿ ಮಠದ ಶ್ರೀ ದಯಾನಂದಗಿರಿ ಸ್ವಾಮೀಜಿ, ಆನಂದಮೂರ್ತಿ, ಪ್ರಶಾಂತ್, ಪ್ರವೀಣ್, ನಾಗಾರ್ಜುನ್ ಸಿಂಧ್ಯಾ, ಮಂಜುನಾಥ್, ಕಿರಣ್, ಮಧು, ನವೀನ್, ಪ್ರಕಾಶ್, ನಾಗರಾಜ್, ಮೋಹನ್ ಇತರರಿದ್ದರು.