ಮಹಾಗಣಪತಿ ಜಾತ್ರೆ ಹಿನ್ನಲೆಯಲ್ಲಿ ಸಾಗರ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಪ್ರಭಾರ ಉಪವಿಭಾಗಾಧಿಕಾರಿ ರಶ್ಮಿ ಮಾತನಾಡಿದರು. ಚಂದ್ರಶೇಖರ ನಾಯ್ಕ, ಮೈತ್ರಿ ಪಾಟೀಲ್, ಸವಿತಾ ವಾಸು ಇತರರಿದ್ದರು.  
ನ್ಯೂಸ್

ಮಾ. 30ರಿಂದ ಶ್ರೀ ಮಹಾಗಣಪತಿ ಜಾತ್ರಾ ಮಹೋತ್ಸವ

ಸಾಗರ: ಶ್ರೀ ಮಹಾಗಣಪತಿ ದೇವರ ಜಾತ್ರಾ ಮಹೋತ್ಸವ ಮಾ.30ರಿಂದ ಏ.5ರವರೆಗೆ ನಡೆಯಲಿದೆ. ಏ.1ರಂದು ರಥೋತ್ಸವ ನಡೆಯಲಿದೆ ಎಂದು ಪ್ರಭಾರ ಉಪವಿಭಾಗಾಧಿಕಾರಿ ರಶ್ಮಿ ಹೇಳಿದರು.

ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಾಗಣಪತಿ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷ ಸಹ ಅದ್ದೂರಿಯಾಗಿ ಗಣಪತಿ ಜಾತ್ರೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಜಾತ್ರೋತ್ಸವ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಜಾತ್ರೆ ಹಿನ್ನೆಲೆಯಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್, ಶುದ್ಧ ಕುಡಿಯುವ ನೀರಿನ ಪೂರೈಕೆ, ಸ್ವಚ್ಛತೆ ಕುರಿತು ಚರ್ಚಿಸಲಾಗಿದೆ. ಸ್ಟಾಲ್‌ಗಳನ್ನು ಹರಾಜು ಮಾಡಲು ಪಾರದರ್ಶಕ ವ್ಯವಸ್ಥೆ ಮಾಡಲಾಗಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಜಾತ್ರೋತ್ಸವ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ ಎಂದರು.

ತಹಸೀಲ್ದಾರ್ ಚಂದ್ರಶೇಖರ ನಾಯ್ಕ ಮಾತನಾಡಿ, ಜಾತ್ರೆಗಾಗಿ ಸರ್ಕಾರದಿಂದ ಬರುವ ಅನುದಾನದ ಜತೆಗೆ ಸ್ಥಳೀಯವಾಗಿ ಸಂಪನ್ಮೂಲ ಕ್ರೂಢಿಕರಣ ಮಾಡಲಾಗುವುದು. ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಪ್ರಮುಖರಾದ ಟಿ.ವಿ.ಪಾಂಡುರಂಗ, ಕೆ.ಎನ್.ನಾಗೇಂದ್ರ, ಐ.ವಿ.ಹೆಗಡೆ, ರಾಘವೇಂದ್ರ ಭಟ್, ಮಧುರಾ ಶಿವಾನಂದ್, ವಿ.ಟಿ.ಸ್ವಾಮಿ, ಬಿ.ಎಚ್.ಲಿಂಗರಾಜ್, ಕಾರ್ಯನಿರ್ವಾಹಣಾಧಿಕಾರಿ ಶಿವಪ್ರಕಾಶ್, ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಮೀಳಾ ಕುಮಾರಿ ಇತರರಿದ್ದರು.