ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಜೈನಮಠಕ್ಕೆ ಶ್ರೀ ಗುಣಭದ್ರನಂದಿ ಮಹಾರಾಜರನ್ನು ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಸ್ವಾಗತಿಸಿದರು.  
ನ್ಯೂಸ್

ಶ್ರೀ ಗುಣಭದ್ರನಂದಿ ಮುನಿ ಪುರಪ್ರವೇಶ

ರಿಪ್ಪನ್‌ಪೇಟೆ: ಹೊಂಬುಜ ಜೈನಮಠಕ್ಕೆ ಆಚಾರ್ಯ ಶ್ರೀ ಗುಣಭದ್ರನಂದಿ ಮುನಿಗಳು ಪುರಪ್ರವೇಶ ಮಾಡಿದರು.

ಆದಿತ್ಯಶ್ರೀ ಮಾತಾಜಿ, ನಿತ್ಯಶ್ರೀ ಮಾತಾಜಿ, ಮೈತ್ರಿಶ್ರೀ ಮಾತಾಜಿ ಅವರು ಮಂಗಲ ಪ್ರವೇಶ ಮಾಡಿದರು. ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಯಕ್ಷಿಶ್ರೀ ಪದ್ಮಾವತಿ ದೇವಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ ಸ್ವಾಮಿ ದರ್ಶನ ಪಡೆದರು. ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಸ್ವಾಗತಿಸಿ ಧರ್ಮಚರ್ಚೆ ನಡೆಸಿದರು.

ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಪದ್ಮಾವತಿ ಮಹಿಳಾ ಸಂಘದ ಸದಸ್ಯೆಯರು, ಭಕ್ತವೃಂದದವರು ವಾದ್ಯಗೋಷ್ಠಿ, ಜಯಘೋಷಗಳೊಂದಿಗೆ ಮುನಿಶ್ರೀಗಳವರ ಸಂಘದವರನ್ನು ಭಕ್ತಿಗೌರವದಿಂದ ಬರಮಾಡಿಕೊಂಡರು.