ಸೊರಬದ ಕತವಾಯಿ ಗ್ರಾಮದಲ್ಲಿ ಆಯೋಜಿಸಿದ್ದ ವಾಲಿಬಾಲ್ ಲೀಗ್ ಪಂದ್ಯಾವಳಿಯನ್ನು ಗ್ರಾಮದ ಹಿರಿಯ ಶಿವಪ್ಪ ನಾಯ್ಕ ಉದ್ಘಾಟಿಸಿದರು. ಅಂಗಡಿ ಚಂದ್ರಪ್ಪ, ರಘುಪತಿ ಸಂಗೇರ್, ಚಂದ್ರಪ್ಪ ಇತರರಿದ್ದರು.  
ನ್ಯೂಸ್

ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿ

ಸೊರಬ: ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ, ಮಾನಸಿಕ ಸಾಮಾರ್ಥ್ಯ ವೃದ್ಧಿಸುವ ಜತೆಯಲ್ಲಿ ಉತ್ತಮ ಆರೋಗ್ಯ ನಮ್ಮದಾಗುತ್ತದೆ ಎಂದು ಗ್ರಾಮದ ಹಿರಿಯ ಶಿವಪ್ಪ ನಾಯ್ಕ ಹೇಳಿದರು.

ಚಂದ್ರಗುತ್ತಿ ಹೋಬಳಿ ಕತವಾಯಿ ಗ್ರಾಮದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಶ್ರೀ ಮಾರಿಕಾಂಬ ಬಾಯ್ಸನಿಂದ ಏರ್ಪಡಿಸಿದ್ದ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಗ್ರಾಮದಲ್ಲಿ ಕ್ರೀಡಾಕೂಟ ಆಯೋಜಿಸುವ ಮನೋಭಾವನೆ ಬೆಳೆಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಗ್ರಾಮದ ಮುಖಂಡ ಅಂಗಡಿ ಚಂದ್ರಪ್ಪ ಮಾತನಾಡಿ, ಗ್ರಾಮಗಳಲ್ಲಿ ಕ್ರೀಡೆಗಳನ್ನು ಆಯೋಜಿಸುವುದರಿಂದ ಸ್ಥಳೀಯ ಯುವಕರ ಕ್ರೀಡಾ ಪ್ರತಿಭೆ ಅನಾವರಣಗೊಳಿಸಲು ಸಾಧ್ಯವಾಗುತ್ತದೆ ಎಂದರು.

ಕತವಾಯಿ, ಶಿವಪುರ, ಬಸ್ತಿಕೊಪ್ಪ ಗ್ರಾಮಗಳ ಸಹಯೋಗದಲ್ಲಿ ಏರ್ಪಡಿಸಿದ್ದ ವಾಲಿಬಾಲ್ ಲೀಗ್ ಪಂದ್ಯಾವಳಿಯಲ್ಲಿ 7 ತಂಡ ಭಾಗವಹಿಸಿದ್ದವು. ವಿಜೇತ ತಂಡಗಳಿಗೆ ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಲಾಯಿತು.

ಗ್ರಾಮ ಸಮಿತಿ ಅಧ್ಯಕ್ಷ ರಘುಪತಿ ಸಂಗೇರ್, ಪ್ರಮುಖರಾದ ಚಂದ್ರಪ್ಪ, ಅಜೀಜ್ ಅಹ್ಮದ್, ಜಗದೀಶ್, ನಾಗರಾಜ್, ಈರಪ್ಪ ಮಾಸ್ತರ್, ಅಣ್ಣಪ್ಪ, ಈಶ್ವರ್ ಸಂಗೇರ್, ಲೋಹಿತ್ ಗೌಡ, ವೀರೇಂದ್ರ ಗೌಡ, ಬೂದ್ಯಪ್ಪ ಗೌಡ, ಯಾಸಿನ್ ಖಾನ್, ಶ್ರೀ ಮಾರಿಕಾಂಬ ಬಾಯ್ಸ ಸಮಿತಿಯವರು ಉಪಸ್ಥಿತರಿದ್ದರು.