ಶ್ರೀ ಶಂಕರ ಮಹಾ ಪಾದುಕೆ ಹೊತ್ತಿರುವ ಅದ್ವೈತ ರಥವು ಸೊರಬದ ಪಟ್ಟಣಕ್ಕೆ ಆಗಮಿಸಿರುವುದು. ವೆಂಕಟಗಿರಿ ಭಟ್, ರಂಗನಾಥ ಭಾವೆ, ಮಹೇಶ್ ಗೋಖಲೆ, ಆಶಾ, ಸರಸ್ವತಿ, ಮಮತಾ ಇತರರಿದ್ದರು.  
ನ್ಯೂಸ್

ಮೇ 1ರಿಂದ ಗೋಸ್ವರ್ಗದಲ್ಲಿ ಶಂಕರ ಪಂಚಮಿ

ಸೊರಬ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬಾನ್ಕುಳಿ ಮಠದ ಗೋಸ್ವರ್ಗದಲ್ಲಿ ಮೇ 1ರಿಂದ 5ರವರೆಗೆ ಶಂಕರ ಪಂಚಮಿ ನಡೆಯಲಿದ್ದು, ಶಂಕರ ಪಂಚಮಿಗೆ ಆಹ್ವಾನಿಸಲು ರಥಯಾತ್ರೆ ಸೊರಬ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಲಿದೆ ಎಂದು ವೆಂಕಟಗಿರಿ ಭಟ್ ತಿಳಿಸಿದರು.

ಶ್ರೀ ಶಂಕರ ತತ್ವ ಸಾರಲು ಹಾಗೂ ಲೋಕಕಲ್ಯಾಣಕ್ಕಾಗಿ ಶ್ರೀ ಶಂಕರ ಮಹಾಪಾದುಕೆ ಹೊತ್ತ ಅದ್ವೈತ ರಥವು ಸೊರಬ ಪಟ್ಟಣದ ಚಿಕ್ಕಪೇಟೆಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿ, ಶ್ರೀ ಶಂಕರಾಚಾರ್ಯರು ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ಭಾರತ ಸಂಚರಿಸಿ ಅದ್ವೈತ ಧ್ವಜ ಎತ್ತಿ ಹಿಡಿದವರು. ಬದುಕಿನ ಪ್ರತಿ ಕ್ಷಣ ಸಾರ್ಥಕ ಪಡಿಸಿಕೊಂಡವರು ಎಂದು ತಿಳಿಸಿದರು.

ಬ್ರಾಹ್ಮಣ ಸಮಾಜದ ಮುಖಂಡ ರಂಗನಾಥ ಭಾವೆ, ಮಹೇಶ ಗೋಖಲೆ, ಎಂ.ಎಸ್.ಕಾಳಿಂಗರಾಜ್, ಸತ್ಯನಾರಾಯಣ ರಾವ್, ಡಾ. ಎಂ.ಕೆ.ಭಟ್, ಚಂದನ್, ಆಶಾ ರಂಗನಾಥ, ಸರಸ್ವತಿ ನಾವಡ, ಲಕ್ಷ್ಮೀ ಮುರಳೀಧರ್, ಮಮತಾ ನಾಡಿಗ್ ಉಪಸ್ಥಿತರಿದ್ದರು.