ತ್ಯಾಗರ್ತಿ: ಇತ್ತೀಚೆಗೆ ಹರಿಯಾಣದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಜೂನಿಯರ್ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ 15 ವರ್ಷದೊಳಗಿನ ಬಾಲಕಿಯರ ಡಬಲ್ಸ್ ವಿಭಾಗದಲ್ಲಿ ವಿಭವಾ ದ್ವಿತೀಯ ಸ್ಥಾನ ಪಡೆದು ಚೀನಾದಲ್ಲಿ 2025ರಲ್ಲಿ ನಡೆಯುವ ಏಷಿಯಾ ಬ್ಯಾಡ್ಮಿಂಟನ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾಳೆ.
ಈಕೆ ಸಾಗರ ತಾಲೂಕಿನ ಕೇಡಲಸರದ ರಾಘವೇಂದ್ರ ಮತ್ತು ವಸುಂಧರಾ ದಂಪತಿ ಪುತ್ರಿ. ಕೆ.ಆರ್.ವಿಭವಾ ಅವರನ್ನು ಹೆಗ್ಗೋಡು ಗ್ರಾಪಂನಿಂದ ಗುರುವಾರ ಸನ್ಮಾನಿಸಲಾಯಿತು.
ಹೆಗ್ಗೋಡು ಗ್ರಾಪಂ ಅಧ್ಯಕ್ಷ ಎಂ.ರಾಘವೇಂದ್ರ, ಉಪಾಧ್ಯಕ್ಷ ಮಂಜಪ್ಪ ಗೌಡ, ಸದಸ್ಯರಾದ ಎಚ್.ಸಿ.ಗುರುದತ್ತ, ಎ.ಎಂ.ಧರ್ಮಪ್ಪ, ಬಿ.ಸುಮಾ, ಎಸ್.ಶೋಭಾ, ಪಿ.ಲಲಿತಾ, ಎಂ.ಎಲ್.ರಾಜೇಶ್, ಮಂಜುಳಾ ಪೈ, ಪಿಡಿಒ ಗಿರೀಶ್ ಇತರರಿದ್ದರು.