ಸೊರಬ ಪಟ್ಟಣದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ ಮಾತನಾಡಿದರು. ಅಣ್ಣಪ್ಪ ಹಾಲಘಟ್ಟ, ಎಂ.ಡಿ.ಶೇಖರ್, ಹಿರಿಯಣ್ಣ ಕಲ್ಲಂಬಿ ಇತರರಿದ್ದರು.  
ನ್ಯೂಸ್

ಯೋಜನೆಗಳಿಂದ ಕ್ಷೇತ್ರದ ಜನರಿಗೆ ಅನುಕೂಲ

ಸೊರಬ: ವಿಶೇಷ ಸಂಪುಟ ಸಭೆಯಲ್ಲಿ ಸೊರಬ ಕ್ಷೇತ್ರದ ನೀರಾವರಿ ಯೋಜನೆಗಳಿಗೆ 168.8 ಕೋಟಿ ರೂ. ಅನುದಾನ ದೊರೆತಿರುವುದು ಸಂತಸದ ಸಂಗತಿ. ಇದರಿಂದ ಬಹುದಿನದ ಬೇಡಿಕೆಯ ಯೋಜನೆಗಳು ಶೀಘ್ರ ಅನುಷ್ಠಾನವಾಗಲಿವೆ ಎಂದು ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ ಹೇಳಿದರು.

ಪಟ್ಟಣದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಬ್ಯಾರೇಜ್ ನಿರ್ಮಿಸಿ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಕಾಲುಸಂಕ ನಿರ್ಮಾಣ, ಚಂದ್ರಗುತ್ತಿ ಪ್ರಾಧಿಕಾರ ರಚನೆಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ ಮಾತನಾಡಿ, ರೈತ ಪರವಾಗಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ. ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿ ಕಾರ್ಯಗಳಿಗೂ ಅನುದಾನ ನೀಡುತ್ತಿದೆ ಎಂದರು.

ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್, ಕಾಂಗ್ರೆಸ್ ಮುಖಂಡ ಹಿರಿಯಣ್ಣ, ಗ್ಯಾರಂಟಿ ಯೋಜನೆ ಸಮಿತಿ ತಾಲೂಕು ಅಧ್ಯಕ್ಷ ಜೈಶೀಲ ಗೌಡ, ಹಾಪ್‌ಕಾಮ್ಸ್ ಜಿಲ್ಲಾಧ್ಯಕ್ಷ ಕೆ.ವಿ.ಗೌಡ, ರಶೀದ್ ಸಾಬ್, ನಾಗರಾಜ್, ಪ್ರಭಾಕರ್, ರುದ್ರಪ್ಪ ಕಡ್ಲೇರ್, ಪ್ರಕಾಶ್, ಮಂಜುನಾಥ್, ಸಂಜೀವ್, ಸುರೇಶ್, ಶಿವಕುಮಾರ್, ಮಹಮದ್ ಸಾಜೀದ್, ಈರೇಶ್ ಮೇಸ್ತ್ರಿ ಇತರರಿದ್ದರು.