ಸೈದರಕಲ್ಲಹಳ್ಳಿಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಏರ್ಪಡಿಸಿದ್ದ ಮಿದುಳು ಮತ್ತು ಮನಸ್ಸಿನ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಸಂತೋಷ್, ಅಣ್ಣಪ್ಪ, ಸುಪ್ರಿತಾ, ಕಿರಣ್, ಡಾ. ಸಚಿನ್ ಇತರರಿದ್ದರು.  
ನ್ಯೂಸ್

ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯಕ

ಹೊಳೆಹೊನ್ನೂರು: ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಮೂಢನಂಬಿಕೆಗೆ ಬಲಿಯಾಗಬಾರದು. ಮೌಢ್ಯಾಚರಣೆಗಳಿಂದ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಸಾರ್ವಜನಿಕರು ದೇವರ ಬಳಿ ಪ್ರಾರ್ಥಿಸುವ ಜತೆ ವೈದ್ಯರ ಸಲಹೆ ಪಡೆಯುವುದು ಸಹ ಮುಖ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಹೇಳಿದರು.

ಸಮೀಪದ ಸೈದರಕಲ್ಲಹಳ್ಳಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಏರ್ಪಡಿಸಿದ್ದ ಮಿದುಳು ಆರೋಗ್ಯ ಮತ್ತು ಮನಸ್ಸಿನ ಆರೋಗ್ಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರೋಗ್ಯ ಸಮಸ್ಯೆಗಳನ್ನು ಕೇವಲ ದೇವರ ಬಳಿ ಅಲ್ಲದೆ ವೈದ್ಯರ ಬಳಿ ತಿಳಿಸಿದಾಗ ಮಾತ್ರ ಪರಿಹಾರವಾಗುತ್ತದೆ ಎಂದರು.

ಆರೋಗ್ಯದ ಜತೆ ಮನಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದನ್ನು ಮರೆಯಬಾರದು. ಅಗತ್ಯ ವೈದ್ಯಕೀಯ ಸಲಹೆಗಳನ್ನು ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು. ವೈದ್ಯರು ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡಿ ಶುಶ್ರೂಷೆಗೆ ಮುಂದಾಗಬೇಕು. ತುರ್ತು ಸಂದರ್ಭಗಳಲ್ಲಿ ವೈದ್ಯರ ಸೇವೆಗೆ ಬೆಲೆಕಟ್ಟಲಾಗದು ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷ ಅಣ್ಣಪ್ಪ, ಉಪಾಧ್ಯಕ್ಷೆ ಸುಪ್ರಿತಾ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಕಿರಣ್, ಮನೋವೈದ್ಯ ಸಚಿನ್, ಪ್ರೊ. ಲೇಖಾ, ಅಣ್ಣಪ್ಪ, ಪಿಡಿಒ ಸೋಮಶೇಖರ್, ನಂಜುಂಡಪ್ಪ, ಮಲ್ಲೇಶಪ್ಪ, ಚಂದ್ರಮ್ಮ, ಮಂಜುನಾಥ್, ಚಂದ್ರಶೇಖರ್, ಪ್ರಾಣೇಶ್ ಇತರರಿದ್ದರು.