ರಿಪ್ಪನ್‌ಪೇಟೆ ಕೆಂಚನಾಲ ಶ್ರೀ ಮಾರಿಕಾಂಬೆ ದರ್ಶನಕ್ಕೆ ಆಗಮಿಸಿದ್ದ ಸಂಸದ ಬಿ.ವೈ.ರಾಘವೇಂದ್ರ, ಹರತಾಳು ಹಾಲಪ್ಪ ಅವರನ್ನು ಜಾತ್ರಾ ಸಮಿತಿಯಿಂದ ಗೌರವಿಸಲಾಯಿತು.  
ನ್ಯೂಸ್

ಕೆಂಚನಾಲದಲ್ಲಿ ಅದ್ದೂರಿ ಮಾರಿಕಾಂಬಾ ಜಾತ್ರೆ

ರಿಪ್ಪನ್‌ಪೇಟೆ: ಸಮೀಪದ ಕೆಂಚನಾಲ ಮಾರಿಕಾಂಬಾ ಜಾತ್ರೆಯು ಅದ್ದೂರಿಯಾಗಿ ಜರುಗಿತು. ದೇವಿ ಮೂರ್ತಿಯನ್ನು ಮಂಗಳವಾದ್ಯಗಳ ಸಹಿತ ಕೆಂಚನಾಲದ ದೇವಸ್ಥಾನದಲ್ಲಿ ಪರಂಪರಾಗತ ಆಚರಣೆಯಂತೆ ವಿಶೇಷ ಪೂಜೆ ನೇರವೇರಿಸಿದ ನಂತರ ದೇವಿ ದರ್ಶನಕ್ಕೆ ಹಾಗೂ ಭಕ್ತಿ ಸಮರ್ಪಣೆಗೆ ಸಾರ್ವಜನಿಕರಿಗೆ ಅನುವು ಮಾಡಿಕೊಡಲಾಯಿತು. ಬೆಳಗ್ಗೆಯಿಂದಲೇ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದರು.

ಕೆರೆಹಳ್ಳಿ ಹೋಬಳಿ ವ್ಯಾಪ್ತಿ ಶಕ್ತಿದೇವತೆ ಮಾರಿಕಾಂಬಾ ದೇವಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಜಾತಿ ಭೇದವಿಲ್ಲದೆ ಮಾರಮ್ಮನ ಮೊರೆ ಹೋಗುವುದು ಸಾಮಾನ್ಯ. ಕೃಷಿ, ಆರ್ಥಿಕ ಪ್ರಗತಿ, ಕುಟುಂಬ ಸೌಖ್ಯ, ಜಾನುವಾರುಗಳ ಕ್ಷೇಮ ಒಳಗೊಂಡಂತೆ ಜೀವನ ನಿರ್ವಹಣೆ ಸಂಕಷ್ಟಗಳ ಪರಿಹಾರಾಥರ್ ದೇವಿ ಸಲಹುತ್ತಾಳೆ ಎಂಬ ನಂಬಿಕೆಯಿದೆ.

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಗೋಪಾಲಕೃಷ್ಣ ಬೇಳೂರು, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಮಾಜಿ ಸಚಿವ ಹರತಾಳು ಹಾಲಪ್ಪ ಭೇಟಿ ನೀಡಿ ದರ್ಶನ ಪಡೆದರು. ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಟ್ಟ ದೇವಸ್ಥಾನದ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ರಶ್ಮಿ, ಉಪತಹಸೀಲ್ದಾರ್ ಗೌತಮ್, ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್, ತಾಪಂ ಮಾಜಿ ಅಧ್ಯಕ್ಷ ವೀರೇಶ ಆಲುವಳ್ಳಿ, ಜಾತ್ರಾ ಸಮಿತಿ ಅಧ್ಯಕ್ಷ ಬಸವರಾಜ್, ಪರಮೇಶ, ಪಿಎಸ್‌ಐ ಪ್ರವೀಣ್ ಹಾಜರಿದ್ದರು.