ಹೊಳೆಹೊನ್ನೂರು ಸಮೀಪದ ಮಾರಶೇಟ್ಟಿಹಳ್ಳಿಯ ಛತ್ರಪತಿ ಸಮುದಾಯ ಭವನವದಲ್ಲಿ ಆಯೋಜಿಸಿದ್ದ ಸರ್ವೋದಯ ನಗರ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಸುರೇಶ್ ಪ್ರಭು ಉದ್ಘಾಟಿಸಿದರು. ಕೆ.ಶ್ರೀನಿವಾಸ್, ಆರ್.ಮಂಜುನಾಥ್, ಲಿಂಗರಾಜು ಇತರರಿದ್ದರು.  
ನ್ಯೂಸ್

ಸೇವಾ ಕಾರ್ಯಗಳಿಂದ ಜೀವನ ಸಾರ್ಥಕ್ಯ

ಹೊಳೆಹೊನ್ನೂರು: ಸದಸ್ಯರ ಸಹಕಾರದಿಂದ ಲಯನ್ಸ್ ಕ್ಲಬ್‌ನ ಸ್ವಂತ ಕಟ್ಟಡ ನಿರ್ಮಾಣಕ್ಕೆ ನಿವೇಶನ ಗುರುತಿಸಲಾಗುವುದು ಎಂದು ಸರ್ವೋದಯನಗರ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಕೆ.ಶ್ರೀನಿವಾಸ್ ಹೇಳಿದರು.

ಸಮೀಪದ ಮಾರಶೆಟ್ಟಿಹಳ್ಳಿಯ ಛತ್ರಪತಿ ಶಿವಾಜಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಸೇವಾ ಚಟುವಟಿಕೆಗಳ ಮೂಲಕ ಸಮಾಜದ ಅಶಕ್ತರಿಗೆ ನೆರವು ಒದಗಿಸಲಾಗುವುದು. ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರುವಲ್ಲಿ ಸೇವಾ ಕಾರ್ಯಗಳು ನೆರವಾಗಲಿವೆ ಎಂದು ತಿಳಿಸಿದರು.

ಸೇವಾ ಕಾರ್ಯಗಳಿಂದ ಜೀವನದಲ್ಲಿ ಸಾರ್ಥಕ ಭಾವ ಸಿಗುತ್ತದೆ. ಸಮಾಜಕ್ಕಾಗಿ ಕೆಲಸ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಸರ್ವೋದಯ ನಗರ ಲಯನ್ಸ್ ಕ್ಲಬ್ 10 ವರ್ಷಗಳಿಂದ ಸಮಾಜಮುಖಿ ಕೆಲಸ ಮಾಡುತ್ತಿದೆ ಎಂದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ನಂತರ ಕಲ್ಲಿಹಾಳ್ ವೃತ್ತದಲ್ಲಿರುವ ಬೀದಿಬದಿ ವ್ಯಾಪಾರಿಗಳಿಗೆ ಛತ್ರಿಗಳನ್ನು ವಿತರಿಸಲಾಯಿತು. ಮಾರಶೇಟ್ಟಿಹಳ್ಳಿ ಸಮುದಾಯ ಆಸ್ಪತ್ರೆಗೆ ವಾಷಿಂಗ್ ಮಷಿನ್ ನೀಡಲಾಯಿತು.

ಸುರೇಶ್ ಪ್ರಭು ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯದರ್ಶಿ ಆರ್.ಮಂಜುನಾಥ್, ಖಜಾಂಚಿ ಲಿಂಗರಾಜು, ಎನ್.ಎಂ.ಹೆಗ್ಡೆ, ಪರ್ಕಳ ಸಿದ್ದರಾಜು, ಪ್ರಶಾಂತ್, ಜಿ.ಎಸ್.ಮಲ್ಲೇಶಪ್ಪ, ಮಂಜುನಾಥ್ ಸ್ವಾಮಿ, ಅಶೋಕ್‌ರಾವ್, ಕುಮಾರ್‌ಸ್ವಾಮಿ, ಕಿರಣ್ ಕುಮಾರ್, ಪ್ರವೀಣ್, ಶಿವಣ್ಣ, ಪಾಲಾಕ್ಷಪ್ಪ, ಮಧು ಮಲ್ಲಿಗೆರೆ, ಶಿವಕುಮಾರ್, ಮೋಹನ್, ಪೂರ್ಣಿಮರಾಜ್, ದೇವರಾಜ್ ಇತರರಿದ್ದರು.