ತ್ಯಾಗರ್ತಿ ಸಮೀಪ ಚಿಕ್ಕಬಿಲಗುಂಜಿ ಕಮಲೇಶ್ವರ ಕ್ರೀಡಾಂಗಣದಲ್ಲಿ ಹಸಿರೀಕರಣಕ್ಕೆ ಚೇತನ್‌ರಾಜ್ ಕಣ್ಣೂರು ಚಾಲನೆ ನೀಡಿದರು. ದಿನೇಶ್, ವಿನಾಯಕ, ಶಿವು, ಉಮೇಶ್, ಜಿ.ಮಂಜುನಾಥ ಇತರರಿದ್ದರು.  
ನ್ಯೂಸ್

ಪರಿಸರ ಸಂರಕ್ಷಣೆಗೆ ಯುವಜನ ಕೈಜೋಡಿಸಲಿ

ತ್ಯಾಗರ್ತಿ: ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಹಸಿರೀಕರಣ ಮತ್ತು ಪರಿಸರ ಸಂರಕ್ಷಣೆಗೆ ಯುವಜನರು ಕೈಜೋಡಿಸಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಚೇತನ್‌ರಾಜ್ ಕಣ್ಣೂರು ಹೇಳಿದರು.

ಚಿಕ್ಕಬಿಲಗುಂಜಿ ಗ್ರಾಮದ ಕಮಲೇಶ್ವರ ಕ್ರೀಡಾಂಗಣದಲ್ಲಿ ಕಮಲೇಶ್ವರ ಕ್ರಿಕೆಟರ್ಸ್‌ ಗೆಳೆಯರ ಬಳಗ ಮತ್ತು ಮಾತೃಭೂಮಿ ಯುವಕ ಸಂಘದದಿಂದ ಏರ್ಪಡಿಸಿದ್ದ ಶ್ರಮದಾನದಲ್ಲಿ ಗಿಡ ನೆಟ್ಟು ಮಾತನಾಡಿದ ಅವರು, ಕ್ರೀಡಾ ಚಟುವಟಿಕೆಗಳ ಜತೆಗೆ ಪರಿಸರ ಕಾಳಜಿ ಹೊಂದುವುದು ಅವಶ್ಯ. ಜತೆಗೆ ಕ್ರೀಡೆಯಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂದು ತಿಳಿಸಿದರು.

ಪ್ರಮುಖರಾದ ಕೆ.ವಿನಾಯಕ, ಉಮೇಶ್, ದಿನೇಶ್, ಮಂಜುನಾಥ್, ಶಿವು, ನಿರಂಜನ, ಮನು ಇತರರಿದ್ದರು.