ಶಿಕಾರಿಪುರದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಕೋಟೋಜಿ ರಾವ್, ರಾಘವೇಂದ್ರ ಕುಲಕರ್ಣಿ, ಡಾ. ಕೆ.ಎಸ್.ಕಿರಣ್‌ಕುಮಾರ್, ಡಾ. ವೀರೇಂದ್ರಕುಮಾರ್ ವಾಲಿ ಇತರರಿದ್ದರು. 
ನ್ಯೂಸ್

ಭಾಷಾ ಹಿರಿಮೆ ಕಟ್ಟಿಕೊಡುವ ಶಾಸನ

ಶಿಕಾರಿಪುರ: ಕನ್ನಡ ರಾಜ್ಯೋತ್ಸವವನ್ನು ಮನೆಮನೆಗಳಲ್ಲಿ ಹಬ್ಬದ ರೀತಿ ಆಚರಿಸಬೇಕು ಎಂದು ಉಪನ್ಯಾಸಕ ಕೋಟೋಜಿ ರಾವ್ ಹೇಳಿದರು.

ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ, ಐಕ್ಯೂಎಸಿ ಸಂಯೋಜಿತ ಭಾಷಾ ಸಂಘದಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ಕನ್ನಡ ಭಾಷೆ ನಮ್ಮ ಜೀವದ, ಭಾವನೆಯ ಭಾಷೆ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಶಾಸನದಲ್ಲಿ ಕನ್ನಡಿಗರ ಶೌರ್ಯ, ಪ್ರಾದೇಶಿಕ, ಜನಪದ ಸೊಗಡು ಕುರಿತ ಉಲ್ಲೇಖಗಳಿವೆ ಎಂದು ತಿಳಿಸಿದರು.

ಬಾಪೂಜಿ ಪ್ರೌಢಶಾಲೆ ಮುಖ್ಯಶಿಕ್ಷಕ ರಾಘವೇಂದ್ರ ಕುಲಕರ್ಣಿ ಮಾತನಾಡಿ, ಕನ್ನಡ ಭಾಷಾ ಸಂಸ್ಕೃತಿಯನ್ನು ಬೆಳೆಸಬೇಕು. ಶಾಸನಗಳು ಕನ್ನಡದ ಹಿರಿಮೆಯನ್ನು ಕಟ್ಟಿಕೊಟ್ಟಿವೆ. ಭಾಷೆಯ ಸೌಂದರ್ಯವನ್ನು ಕವಿಗಳು ಬರವಣಿಗೆಯಲ್ಲಿ ದಾಖಲಿಸಿದ್ದಾರೆ ಎಂದರು.

ಕರ್ನಾಟಕದ ಗತವೈಭವ, ಕರ್ನಾಟಕದ ಕಲೆ ಮತ್ತು ವಾಸ್ತುಶಿಲ್ಪ, ಜಲಾಶಯಗಳು ಮತ್ತು ಜಲಪಾತಗಳು, ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು ಎಂಬ ಶೀರ್ಷಿಕೆಯಡಿ ಪ್ರತಿ ನಿತ್ಯ ಪ್ರತಿ ತಂಡದವರು ಭಿತ್ತಿಪತ್ರಗಳ ಅನಾವರಣ, ಶೀರ್ಷಿಕೆಗೆ ಅನುಗುಣವಾಗಿ ಮಾಹಿತಿ ಅಭಿವ್ಯಕ್ತಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಉತ್ತಮ ಪ್ರದರ್ಶನ, ಅಭಿವ್ಯಕ್ತಿ ಮಾಡಿದ ತಂಡಗಳನ್ನು ಶ್ಲಾಘಿಸಿದರು.

ಭಾಷಾ ಸಂಘದ ಮಾರ್ಗದರ್ಶಕ ಡಾ. ಕೆ.ಎಸ್.ಕಿರಣ್‌ಕುಮಾರ್, ಡಾ. ಎಸ್.ವೀರೇಂದ್ರಕುಮಾರ್ ವಾಲಿ, ಡಾ. ಎಚ್.ರವಿ, ಕಾಲೇಜಿನ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಇದ್ದರು.