ನ್ಯೂಸ್

ಕರ್ನಾಟಕ ಸಂಘದಿಂದ ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ

ಶಿವಮೊಗ್ಗ: ಕರ್ನಾಟಕ ಸಂಘದಿಂದ 2022ನೇ ಸಾಲಿನಲ್ಲಿ ಮೊದಲ ಮುದ್ರಣಗೊಂಡ 12 ಪ್ರಕಾರಗಳ ಕನ್ನಡ ಪುಸ್ತಕಗಳಿಗೆ ವಿವಿಧ ಸಾಹಿತಿಗಳ ಹೆಸರಿನಲ್ಲಿ ಬಹುಮಾನವನ್ನು ನೀಡಲು ಲೇಖಕರಿಂದ ಮತ್ತು ಪ್ರಕಾಶಕರಿಂದ ನಿಯಮಗಳಿಗೆ ಒಳಪಟ್ಟಂತೆ ಕೃತಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತರು ತಮ್ಮ ಕೃತಿಗಳ ನಾಲ್ಕು ಪ್ರತಿಗಳನ್ನು ಮಾ.15ರೊಳಗೆ ಗೌರವ ಕಾರ್ಯದರ್ಶಿ, ಕರ್ನಾಟಕ ಸಂಘ, ಬಿ.ಎಚ್.ರಸ್ತೆ, ಶಿವಮೊಗ್ಗ-577201 ಇಲ್ಲಿಗೆ ಕಳುಹಿಸಬಹುದು ಎಂದು ಸಂಘದ ಗೌರವ ಕಾರ್ಯದರ್ಶಿ ಪ್ರೊ.ಎಂ.ಆಶಾಲತಾ ತಿಳಿಸಿದ್ದಾರೆ.

ಕಾದಂಬರಿ (ಕುವೆಂಪು ಪ್ರಶಸ್ತಿ), ಅನುವಾದಿತ ಕೃತಿ (ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ), ಮಹಿಳಾ ಸಾಹಿತ್ಯಕ್ಕೆ ( ಎಂ.ಕೆ. ಇಂದಿರಾ ಪ್ರಶಸ್ತಿ), ಮುಸ್ಲಿಂ ಬರಹಗಾರರ ಕೃತಿ (ಪಿ. ಲಂಕೇಶ್ ಪ್ರಶಸ್ತಿ), ಕವನ ಸಂಕಲನ (ಡಾ. ಜಿ. ಎಸ್. ಶಿವರುದ್ರಪ್ಪ ಪ್ರಶಸ್ತಿ), ಅಂಕಣ ಬರಹಗಾರರಿಗೆ (ಡಾ.ಹಾ.ಮಾ. ನಾಯಕ ಪ್ರಶಸ್ತಿ), ಸಣ್ಣ ಕಥಾ ಸಂಕಲನ (ಡಾ. ಯು. ಆರ್. ಅನಂತಮೂರ್ತಿ ಪ್ರಶಸ್ತಿ), ನಾಟಕ ಕೃತಿ (ಡಾ. ಕೆ. ವಿ. ಸುಬ್ಬಣ್ಣ ಪ್ರಶಸ್ತಿ), ಪ್ರವಾಸ ಸಾಹಿತ್ಯ ( ಕುಕ್ಕೆ ಸುಬ್ರಹ್ಮಣ್ಯ ಶಾಸಿ ಪ್ರಶಸ್ತಿ), ವಿಜ್ಞಾನ ಸಾಹಿತ್ಯ ( ಹಸೂಡಿ ವೆಂಕಟಶಾಸಿ ಪ್ರಶಸ್ತಿ), ಮಕ್ಕಳ ಸಾಹಿತ್ಯ (ಡಾ. ನಾ. ಡಿಸೋಜ ಪ್ರಶಸ್ತಿ), ವೈದ್ಯ ಸಾಹಿತ್ಯ (ಡಾ. ಎಚ್. ಡಿ. ಚಂದ್ರಪ್ಪಗೌಡ ಪ್ರಶಸ್ತಿ) ನೀಡಲಾಗುತ್ತದೆ.

ಕರ್ನಾಟಕ ಸಂಘದ ಯಾವುದೇ ಪ್ರಕಾರದಲ್ಲಿ ಪುಸ್ತಕ ಬಹುಮಾನ ಒಂದು ಬಾರಿ ಪಡೆದವರು ಪುನಃ ಅದೇ ವಿಭಾಗಕ್ಕೆ ಕೃತಿ ಕಳುಹಿಸುವಂತಿಲ್ಲ. ಬೇರೆ ವಿಭಾಗಕ್ಕೆ ಕೃತಿ ಕಳುಹಿಸಿದರೆ ಪರಿಗಣಿಸಲಾಗುವುದು. ಮರುಮುದ್ರಣಗೊಂಡ ಕೃತಿಗಳಿಗೆ ಮತ್ತು ಹಸ್ತ ಪ್ರತಿಗಳಿಗೆ ಅವಕಾಶವಿರುವುದಿಲ್ಲ. ಕರ್ನಾಟಕ ಸಂಘದ ಸದಸ್ಯರನ್ನು ಹೊರತುಪಡಿಸಿ, ಇತರ ಲೇಖಕಕರು ತಮ್ಮ ಕೃತಿಗಳನ್ನು ಸ್ಪರ್ಧೆಗೆ ಕಳಿಸಿಕೊಡಬಹುದು. ಪ್ರಶಸ್ತಿಗೆ ಕಳುಹಿಸಿದ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ. ಈ ಪುಸ್ತಕಗಳನ್ನು ಕರ್ನಾಟಕ ಸಂಘದ ಗ್ರಂಥಾಲಯಕ್ಕೆ ತೆಗೆದುಕೊಳ್ಳಲಾಗುವುದು.

ಅತ್ಯುತ್ತಮವೆಂದು ಆಯ್ಕೆಯಾದ ಕೃತಿಗಳಿಗೆ ತಲಾ 10 ಸಾವಿರ ಸಾವಿರ ರೂ. ನಗದು ಮತ್ತು ಸ್ಮರಣಿಕೆ ನೀಡಲಾಗುವುದು. ವಿವರಗಳಿಗೆ (ದೂ.08182-277406, ಮೊ.9980159696)ಸಂಪರ್ಕಿಸಬಹುದು