ಸಾಗರದ ಸ್ವತಂತ್ರ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿಗಳಿಗೆ ಸಾಗರ ಕರಾಟೆ ಸಂಸ್ಥೆಯಿಂದ ಶಿಹಾನ್ ಪಂಚಪ್ಪ ನೇತೃತ್ವದಲ್ಲಿ ಕರಾಟೆ ತರಬೇತಿ ನೀಡಲಾಯಿತು.  
ನ್ಯೂಸ್

ಆತ್ಮರಕ್ಷಣೆಗೆ ಕರಾಟೆ ಕಲಿಕೆ ಅಗತ್ಯ

ಸಾಗರ: ನಗರದ ಸ್ವತಂತ್ರ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಸಾಗರ ಕರಾಟೆ ಸಂಸ್ಥೆಯಿಂದ ಶಿಹಾನ್ ಪಂಚಪ್ಪ ನೇತೃತ್ವದಲ್ಲಿ ಕರಾಟೆ ತರಬೇತಿ ನೀಡಲಾಯಿತು.

ಶಿಹಾನ್ ಪಂಚಪ್ಪ ಮಾತನಾಡಿ, ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆ ಕಲೆ ಕಲಿಸುವುದು ಅಗತ್ಯ. ರಾಜ್ಯ ಸರ್ಕಾರ ಪ್ರಥಮ ಮತ್ತು ದ್ವಿತೀಯ ಪಿಯು ಮಕ್ಕಳು ಕರಾಟೆ ಕ್ರೀಡೆಯನ್ನು ಕಲಿಯುವುದರಿಂದ ರಕ್ಷಣೆ ಮಾಡಿಕೊಳ್ಳುವ ಜತೆಗೆ ಸಂಕಷ್ಟದಲ್ಲಿರುವ ಇತರರನ್ನು ರಕ್ಷಣೆ ಮಾಡಲು ಸಾಧ್ಯ ಎಂದು ತಿಳಿಸಿದರು.

ಸರ್ಕಾರದ ಸೂಚನೆಯಂತೆ ಸಾಗರ ತಾಲೂಕಿನ ಎಲ್ಲ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ತರಬೇತಿ ನೀಡಲಾಗುತ್ತದೆ. ಕರಾಟೆ ಕಲಿಕೆಯಿಂದ ಓದಿನಲ್ಲಿ ಆಸಕ್ತಿ, ಸಮಯ ಪಾಲನೆ, ಶಿಸ್ತು, ದೈಹಿಕ ಸದೃಢತೆ ಸಾಧಿಸಲು ಸಾಧ್ಯವಿದೆ. ಮಕ್ಕಳು ಆಸಕ್ತಿಯಿಂದ ಕಲಿಯಬೇಕು ಎಂದರು. ಪ್ರಾಚಾರ್ಯ ಅರುಣಕುಮಾರ್, ರೇಣುಕಪ್ಪ ಇತರರಿದ್ದರು.