ಸೊರಬ ತಾಲೂಕಿನ ಪುರಾಣ ಪ್ರಸಿದ್ಧ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಕಾರ ಹುಣ್ಣಿಮೆ (ವಟಸಾವಿತ್ರಿ) ಪ್ರಯುಕ್ತ ಸಾವಿರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. 
ನ್ಯೂಸ್

ಚಂದ್ರಗುತ್ತಿಯಲ್ಲಿ ಕಾರ ಹುಣ್ಣಿಮೆ ಪೂಜೆ

ಸೊರಬ: ತಾಲೂಕಿನ ಪುರಾಣ ಪ್ರಸಿದ್ಧ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಕಾರ ಹುಣ್ಣಿಮೆ(ವಟಸಾವಿತ್ರಿ) ಪ್ರಯುಕ್ತ ಸಾವಿರಾರು ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ಹಿರೇಕೆರೂರು, ಬ್ಯಾಡಗಿ, ರಾಣೆಬೆನ್ನೂರು, ಶಿಕಾರಿಪುರ, ಹಾವೇರಿ, ಹಾನಗಲ್, ಚಿತ್ರದುರ್ಗ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಶ್ರೀ ರೇಣುಕಾಂಬ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು. ಪರಿವಾರ ದೇವರು ನಾಗದೇವತೆ, ಮಾತಂಗಿ, ಕಾಲಬೈರವ, ಪರಶುರಾಮ, ತ್ರಿಶೂಲ ಬೈರಪ್ಪ ಹಾಗೂ ತೊಟ್ಟಿಲ ಬಾವಿಗೆ ನೈವೇದ್ಯ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.

ಧಾರ್ಮಿಕ ಪೂಜಾ ವಿಧಾನಗಳಾದ ಪಡ್ಲಿಗೆ ತುಂಬಿಸುವುದು, ಕಿವಿ ಚುಚ್ಚಿಸುವುದು ವಿವಿಧ ಸೇವೆ ಆಚರಿಸಲಾಯಿತು. ಕೆಲ ಸಮಯ ಮುಖ್ಯ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆಯಾಯಿತು. ಕಾರ ಹುಣ್ಣಿಮೆ ಪ್ರಯುಕ್ತ ಹಿರೆಕೇರೂರು, ಸಾಗರ, ಶಿರಸಿ ಭಾಗಗಳಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.