ಸೊರಬ: ಶಿಕ್ಷಣ ಮತ್ತು ವ್ಯವಹಾರದಲ್ಲಿ ಕಡ್ಡಾಯವಾಗಿ ಎಲ್ಲರೂ ಕನ್ನಡ ಬಳಸಬೇಕು ಎಂದು ಶ್ರೀ ರೇಣುಕಾಂಬ ಆಟೋ ಮಾಲೀಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ರಾಘವೇಂದ್ರ ಹೇಳಿದರು.
ಚಂದ್ರಗುತ್ತಿಯಲ್ಲಿ ಶ್ರೀ ರೇಣುಕಾಂಬ ಆಟೋ ಮಾಲೀಕರು ಮತ್ತು ಚಾಲಕರ ಸಂಘದಿಂದ ಆಯೋಜಿಸಿದ್ದ ಕನ್ನಡ ರಾಜೋತ್ಸವದಲ್ಲಿ ಮಾತನಾಡಿ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಇದ್ದು ಯುವಪೀಳಿಗೆಗೆ ಕನ್ನಡ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ಚಂದ್ರಗುತ್ತಿ ಪೊಲೀಸ್ ಠಾಣೆ ಹೆಡ್‌ಕಾನ್‌ಸ್ಟೇಬಲ್ ಎಂ.ಬಿ.ನಾಗರಾಜ್ ಮಾತನಾಡಿ, ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಹೊಂದಬೇಕು. ಕನ್ನಡ ರಾಜ್ಯೋತ್ಸವ ನವೆಂಬರ್‌ಗೆ ಸೀಮಿತವಾಗದೆ ನಿತ್ಯೋತ್ಸವವಾಗಬೇಕು ಎಂದರು.
ಗ್ರಾಮದ ಮುನಾಫ್ ಸಾಬ್ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಸಂಘದಿಂದ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು. ವಾಹನಗಳಿಗೆ ಕನ್ನಡ ಬಾವುಟ ಕಟ್ಟಿ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಕನ್ನಡ ಅಭಿಮಾನ ಮೆರೆದರು. ಯಶವಂತಪ್ಪ ಮಾಸ್ತರ್, ಸಂಘದ ಉಪಾಧ್ಯಕ್ಷ ಶಿವರಾಜ್ ಗದ್ದೆಮನೆ, ಕಾರ್ಯದರ್ಶಿ ಡಿ.ರಾಜು, ರಾಘವೇಂದ್ರ ಚನ್ನಪಟ್ಟಣ, ಸಂಘದ ಸದಸ್ಯರಾದ ಪ್ರಕಾಶ್, ಅಶೋಕ್, ಹುಚ್ಚಪ್ಪ, ಪ್ರತಾಪ, ಸಚಿನ್, ಮಂಜಪ್ಪ, ಅಶ್ವಥ್, ಕುಶ, ಪವನ, ಗ್ರಾಮಸ್ಥರು ಇದ್ದರು.