ಸೊರಬ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಶಶ್ರೂಷಕಿಯರ ದಿನ ಆಚರಿಸಲಾಯಿತು. ಡಾ. ಪ್ರಭು ಸಾಹುಕಾರ್, ಡಾ. ಅಭಿಷೇಕ್, ಸರೋಜಾ ದೇವಿ ಇತರರಿದ್ದರು.  
ನ್ಯೂಸ್

ಶುಶ್ರೂಷಕರಿಂದ ಉತ್ತಮ ಆರೋಗ್ಯ ಸೇವೆ

ಸೊರಬ: ರೋಗಿಗಳಿಗೆ ಉತ್ತಮ ಸೇವೆ ಸಲ್ಲಿಸುವಲ್ಲಿ ಶುಶ್ರೂಷಕಿಯರ ಪಾತ್ರ ಮಹತ್ತರ ಎಂದು ಆಡಳಿತ ವೈದ್ಯಾಧಿಕಾರಿ ಡಾ. ಪ್ರಭು ಸಾಹುಕಾರ್ ಹೇಳಿದರು.

ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಶುಶ್ರೂಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಶುಶ್ರೂಷಕಿಯರು ಆರ್ಥಿಕವಾಗಿ ಸದೃಢರಾಗಲು ಆಸ್ಪತ್ರೆ ಆಡಳಿತ ಮಂಡಳಿ ಹೆಚ್ಚು ಕಾಳಜಿ ವಹಿಸಬೇಕಿದೆ. ಅವರನ್ನು ಗೌರವಿಸುವ ಕಾರ್ಯ ಎಲ್ಲರ ಜವಾಬ್ದಾರಿ. ಶುಶ್ರೂಷಕಿಯರೂ ಕೂಡ ಆಸ್ಪತ್ರೆ ಗೌರವ ಕಾಪಾಡುವಲ್ಲಿ ಶ್ರಮಿಸಬೇಕಿದೆ. ಮುಂದಿನ ದಿನಗಳಲ್ಲಿ ಶುಶ್ರೂಷಕರ ದಿನಾಚರಣೆಯಲ್ಲಿ ಉತ್ತಮ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದರು.

ಡಾ. ಅಭಿಷೇಕ್, ಡಾ. ಸತೀಶ್, ಕಚೇರಿ ಅಧಿಕ್ಷಕ ಚಂದ್ರಪ್ಪ, ಶುಶ್ರೂಷಕಾ ಅಧಿಕ್ಷಕಿ ಸರೋಜಾ ದೇವಿ ಇದ್ದರು.