ಕಾರ್ಗಲ್‌ನಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವವನ್ನು ಕೆಪಿಸಿ ಶರಾವತಿ ಕಣಿವೆ ಯೋಜನೆ ವಿದ್ಯುತ್ ವಿಭಾಗದ ಮುಖ್ಯ ಅಭಿಯಂತ ಎಚ್.ಆರ್.ರಮೇಶ್ ಉದ್ಘಾಟಿಸಿದರು. ಆರ್.ಶಿವಕುಮಾರ್, ಪೂರ್ಣಿಮಾ, ಕೆ.ವೀರೇಂದ್ರ ಗೌಡ, ಗಿಡ್ಡಪ್ಪಗೌಡ ಇತರರಿದ್ದರು. 
ನ್ಯೂಸ್

ಭೌಗೋಳಿಕ ವ್ಯಾಪ್ತಿ ಪ್ರಕೃತಿ ಕೊಡುಗೆ

ಕಾರ್ಗಲ್: ರಾಜ್ಯದ ಭೌಗೋಳಿಕ ವ್ಯಾಪ್ತಿಯು ಪ್ರಕೃತಿಯ ಕೊಡುಗೆಯಾಗಿದ್ದು, ಕನ್ನಡ ನಾಡಿನಲ್ಲಿ ಜನ್ಮ ತಾಳಿರುವುದು ನಮ್ಮ ಪುಣ್ಯ ಎಂದು ಕೆಪಿಸಿ ಶರಾವತಿ ಕಣಿವೆ ಯೋಜನೆಯ ವಿದ್ಯುತ್ ವಿಭಾಗದ ಮುಖ್ಯ ಅಭಿಯಂತ ಎಚ್.ಆರ್.ರಮೇಶ್ ಹೇಳಿದರು.

ಕೆಪಿಸಿ ಅಫೀಶಿಯಲ್ಸ್ ರಿಕ್ರಿಯೇಶನ್ ಕ್ಲಬ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ರಾಷ್ಟ್ರೀಯ ವಿಪತ್ತುಗಳಂತಹ ವ್ಯತಿರಿಕ್ತ ಪರಿಸ್ಥಿತಿ ಉಂಟಾದರೂ ಕರ್ನಾಟಕದಲ್ಲಿ ಈ ಪ್ರಮಾಣ ಅತ್ಯಂತ ಕಡಿಮೆ. ಆದ್ದರಿಂದ ಈ ನಾಡು ಪುಣ್ಯಭೂಮಿ ಎಂದು ತಿಳಿಸಿದರು.

ಕನ್ನಡ ಭಾಷೆಯನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗುವಲ್ಲಿ ಸಾಕಷ್ಟು ಮಹನೀಯರು ಶ್ರಮಿಸಿದ್ದಾರೆ. ರಾಜ್ಯದ ವಿಭಿನ್ನ ಪ್ರದೇಶಗಳಲ್ಲಿ ಕನ್ನಡದ ವಿಭಿನ್ನ ಭಾಷೆ ಶೈಲಿ ಕಾಣುತ್ತೇವೆ. ವಿಭಿನ್ನತೆಗಳು ಇದ್ದರೂ ಕೂಡ ಭಾಷೆ ವಿಷಯ ಬಂದಾಗ ಏಕತೆ ಪ್ರದರ್ಶಿಸುವುದು ನಮ್ಮ ಗುಣವಾಗಿದೆ ಎಂದರು.

ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು. ಕೆಪಿಸಿ ನಿಗಮದ ಅಧೀಕ್ಷಕ ಅಭಿಯಂತ ಆರ್.ಶಿವಕುಮಾರ್, ಅಧಿಕಾರಿ ಪೂರ್ಣಿಮಾ, ಎಂಪ್ಲಾಯಿಸ್ ಯೂನಿಯನ್ ಕೇಂದ್ರ ಸಮಿತಿ ಅಧ್ಯಕ್ಷ ಕೆ.ವೀರೇಂದ್ರ ಗೌಡ, ಲೆಕ್ಕಾಧಿಕಾರಿ ಗಿಡ್ಡಪ್ಪಗೌಡ, ಇಂಜಿನಿಯರ್‌ಗಳಾದ ವಾಸುದೇವ ಮೂರ್ತಿ, ಅನಿತಾ, ಶ್ರೀಲಕ್ಷ್ಮೀ, ಬಸವರಾಜ್, ಪ್ರದೀಪ್, ಸುರೇಶ್, ಶಂಕರಪ್ಪ, ಇ.ರಾಜು, ರಮೇಶ್ ಶೀನಪ್ಪ, ಮಹೇಶ್, ಪ್ರಮುಖರಾದ ಎಸ್.ನಾಗರಾಜ್, ಮಾದಪ್ಪ, ಕೇಶವೇಗೌಡ, ರಾಮಚಂದ್ರ, ನಂದನ್ ಇತರರಿದ್ದರು.