ಸೊರಬ: ತಾಲೂಕಿನ ಮಳಲಗದ್ದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಶೋಕ ಹೆಗಡೆ 5ನೇ ಬಾರಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಬೈರಪ್ಪ ಮೈಸಾವಿ ಅವಿರೋಧ ಆಯ್ಕೆಯಾದರು.
ನೂತನ ಅಧ್ಯಕ್ಷ ಅಶೋಕ ಹೆಗಡೆ ಮಾತನಾಡಿ, ಐದು ವರ್ಷ ಎಲ್ಲರ ಸಹಕಾರದಿಂದ ಉತ್ತಮ ಕೆಲಸ ಮಾಡಲು ಬದ್ಧರಿದ್ದೇವೆ. ಸಾಲ ಸೌಲಭ್ಯ, ಸಂಘದಲ್ಲಿ ರೈತ ಸದಸ್ಯರಿಗೆ ರಸಗೊಬ್ಬರ, ಔಷಧ ಹಾಗೂ ಕೃಷಿ ಚಟುವಟಿಕೆಗೆ ಬೇಕಾಗುವ ಸಾಮಾಗ್ರಿ ಮಾರಾಟ, ಛಾಪಾ ಕಾಗದ, ಗೋದಾಮು ಸೌಲಭ್ಯ ಕಲ್ಪಿಸುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.
ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ, ಹಾಪ್‌ಕಾಮ್ಸ್ ಜಿಲ್ಲಾಧ್ಯಕ್ಷ ಕೆ.ವಿ.ಗೌಡ, ಮುಖಂಡರಾದ ಗಣಪತಿ, ಎಂ.ಡಿ.ಶೇಖರ್, ಸುರೇಶ್, ನಿರ್ದೇಶಕರಾದ ಭಾಸ್ಕರ್, ಪುಟ್ಟಪ್ಪ, ಮೋಹನ್, ಲೋಕೇಶ್, ರಮೇಶ್, ಕಾರ್ಯದರ್ಶಿ ವಿನಯ್, ಕ್ಷೇತ್ರಾಧಿಕಾರಿ ಶರಣಪ್ಪ ಇತರರಿದ್ದರು.