ಹೊಳೆಹೊನ್ನೂರಿನ ಸಮೀಪದ ಮಾರಶೆಟ್ಟಿಹಳ್ಳಿಯ ಮರಾಠ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಶ್ರೀ ವಾಲ್ಮೀಕಿ ನಾಯಕ ಪತ್ತಿನ ಸಹಕಾರ ಸಂಘದ ಮಹಾಸಭೆಯಲ್ಲಿ ಎಂ.ಎಸ್.ಬಸವರಾಜಪ್ಪ, ಟಿ.ಶೇಖರಪ್ಪ, ಲಕ್ಷ್ಮಣಪ್ಪ, ನಾಗರಾಜಪ್ಪ ಇತರರಿದ್ದರು.  
ನ್ಯೂಸ್

ಸಂಘದ ಏಳಿಗೆಗೆ ಪ್ರತಿಯೊಬ್ಬರೂ ಶ್ರಮಿಸಿ

ಹೊಳೆಹೊನ್ನೂರು: ರೈತರು ಸಹಕಾರ ಕ್ಷೇತ್ರವನ್ನು ಉಪಯೋಗಿಸಿ ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎಂದು ವಾಲ್ಮೀಕಿ ನಾಯಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್.ಬಸವರಾಜಪ್ಪ ಹೇಳಿದರು.

ಸಮೀಪದ ಮಾರಶೆಟ್ಟಿಹಳ್ಳಿ ಮರಾಠ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರೀ ವಾಲ್ಮೀಕಿ ನಾಯಕ ಪತ್ತಿನ ಸಹಕಾರ ಸಂಘದ ಮಹಾಸಭೆಯಲ್ಲಿ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಷೇರುದಾರರ ಸಹಕಾರ ಮರೆಯುವಂತಿಲ್ಲ. ಅನ್ನದಾತರ ಪಾಲಿಗೆ ಯಶಸ್ವಿನಿ ಆರೋಗ್ಯ ಯೋಜನೆ ಸಂಜೀವಿ ಇದ್ದಂತೆ. ಸಂಘ ಖರೀದಿಸಿರುವ ಸ್ವಂತ ಜಾಗದ ಸಮಸ್ಯೆ ಸದ್ಯದಲ್ಲೆ ಪರಿಹಾರವಾಗುವುದು. ಸಕಾಲದಲ್ಲಿ ಸಾಲ ಮರು ಪಾವತಿಸಿ ಸಂಘದ ಏಳಿಗೆಗೆ ಶ್ರಮಿಸಬೇಕು. ಸಹಕಾರ ಕ್ಷೇತ್ರದ ಲಾಭಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ತಿಳಿಸಿದರು.

ಸಹಕಾರ ಕ್ಷೇತ್ರದಲ್ಲಿ ರಾಜಕೀಯ ನುಸುಳದಂತೆ ಎಚ್ಚರ ವಹಿಸಬೇಕು. ಸಂಘದಲ್ಲಿ ನಡೆಯುವ ಸಭೆಗಳಿಗೆ ತಪ್ಪದೆ ಹಾಜರಾಗಬೇಕು. ಶೂನ್ಯ ಬಡ್ಡಿದರ ಸಾಲ ಸೌಲಭ್ಯ ಕೃಷಿಕರಿಗೆ ವರದಾನ, ರೈತರು ಸಂಘಗಳಲ್ಲಿ ವ್ಯವಹಾರ ಮಾಡಬೇಕು. ಷೇರುಧನ ಹೆಚ್ಚಳವಾದಷ್ಟು ದುಡಿಯುವ ಬಂಡವಾಳ ಲಭ್ಯವಾಗುತ್ತದೆ ಎಂದರು.

ಸಂಘದ ಉಪಾಧ್ಯಕ್ಷ ಟಿ.ಶೇಖರಪ್ಪ, ಲಕ್ಷ್ಮಣಪ್ಪ, ನಾಗರಾಜಪ್ಪ, ರಂಗಪ್ಪ, ಶಿವಕುಮಾರ್, ಕೆ.ಆರ್.ಶ್ರೀಧರ್, ರವಿಕುಮಾರ್, ಪ್ರೇಮಾ ತಿಮ್ಮಪ್ಪ, ಶಕುಂತಲಾ ಹಾಲೇಶ್, ತಿಪ್ಪೇಶ್, ಬಸವರಾಜಪ್ಪ, ಶಿವಮೂರ್ತಿ, ನಾಗರಾಜ್, ಚಂದ್ರಪ್ಪ ಹಾಜರಿದ್ದರು.