ಸಾಗರದ ಲೋಹಿಯಾ ನಗರದಲ್ಲಿ ಲಯನ್ಸ್ ಕ್ಲಬ್ ಸಾಗರ ಶ್ರೀಗಂಧ ಸಂಸ್ಥೆಯಿಂದ ಏರ್ಪಡಿಸಿದ್ದ ವನಮಹೋತ್ಸವದಲ್ಲಿ ಸಸಿ ನೆಡಲಾಯಿತು. ಸರಸ್ವತಿ ನಾಗರಾಜ್, ಶೈಲೇಶ್, ಅಕ್ಷಯ್‌ಕುಮಾರ್, ಮೇಜರ್ ನಾಗರಾಜ್ ಇತರರಿದ್ದರು.  
ನ್ಯೂಸ್

ಪರಿಸರ ನಾಶ ಮನುಕುಲಕ್ಕೆ ಮಾರಕ

ಸಾಗರ: ಕೆಲವರು ಪರಿಸರ ನಾಶ ಮಾಡುವ ಮೂಲಕ ಮನುಕುಲಕ್ಕೆ ಮಾರಕವಾಗುತ್ತಿದ್ದಾರೆ ಎಂದು ಲಯನ್ಸ್ ಕ್ಲಬ್ ಸಾಗರ ಶ್ರೀಗಂಧ ಸಂಸ್ಥೆ ಅಧ್ಯಕ್ಷೆ ಸರಸ್ವತಿ ನಾಗರಾಜ್ ಹೇಳಿದರು.

ಲೋಹಿಯಾ ನಗರದಲ್ಲಿ ಲಯನ್ಸ್ ಕ್ಲಬ್ ಸಾಗರ ಶ್ರೀಗಂಧ ಸಂಸ್ಥೆಯಿಂದ ಏರ್ಪಡಿಸಿದ್ದ ವನಮಹೋತ್ಸವದಲ್ಲಿ ಗಿಡ ನೆಟ್ಟು ಮಾತನಾಡಿ, ಪ್ರತಿಯೊಂದು ಮನೆಯಲ್ಲೂ ಪಾಲಕರು ಮಕ್ಕಳಿಗೆ ಪರಿಸರದ ಮಹತ್ವ, ಸಸಿ ನೆಟ್ಟು ಪೋಷಿಸುವ ಅಗತ್ಯ ಕುರಿತು ಅರಿವು ಮೂಡಿಸಬೇಕು. ಪರಿಸರ ಉಳಿದರೆ ಮಾತ್ರ ನಾವು, ಮುಂದಿನ ಪೀಳಿಗೆ ಆರೋಗ್ಯಪೂರ್ಣ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು.

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶವಾಗುತ್ತಿದೆ. ಹವಮಾನ ವೈಪರೀತ್ಯ, ಅಕಾಲಿಕ ಮಳೆ, ಸುನಾಮಿ, ಭೂಕಂಪಗಳಿಗೆ ಪರಿಸರ ನಾಶವೇ ಕಾರಣ ಎಂದರು.

ಲಯನ್ಸ್ ಸಾಗರ ಶ್ರೀಗಂಧ ಕಾರ್ಯದರ್ಶಿ ಶೈಲೇಶ್, ಖಜಾಂಚಿ ಅಕ್ಷಯ್‌ಕುಮಾರ್, ಮೇಜರ್ ನಾಗರಾಜ್, ಎನ್.ಆರ್.ವಿನಯ್ ಇತರರಿದ್ದರು.