ನ್ಯೂಸ್

ಅಗಸ್ತ್ಯ ವಿಜ್ಞಾನ ಕೇಂದ್ರದಿಂದ ಪರಿಸರ ಜಾಗೃತಿ

ಆಯನೂರು: ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹುಬ್ಬನಹಳ್ಳಿ, ಕುಂಸಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಸಲಾಯಿತು.

ಆಯನೂರಿನ ವಿಜ್ಞಾನ ಕೇಂದ್ರದ ಆವರಣದಲ್ಲಿ ನರೇಗಾ ಯೋಜನೆಯಡಿ 1,200 ಗಿಡಗಳನ್ನು ನೆಟ್ಟು ಹಸಿರಿನ ಪ್ರಾಮುಖ್ಯತೆ ಪರಿಚಯಿಸಲಾಯಿತು. ವಿಜ್ಞಾನ ಕೇಂದ್ರದ ಆಡಳಿತಾಧಿಕಾರಿ ಶಿವರಾಜ್ ಗೊರನಾಳ್ ಮಾತನಾಡಿ, ಈ ವರ್ಷ ಅಗಸ್ತ್ಯ ವಿಜ್ಞಾನ ಕೇಂದ್ರದಿಂದ ನಡೆದ ವಿಶ್ವ ಪರಿಸರ ದಿನವು ಸಣ್ಣ ಕಾರ್ಯಗಳು ಸಹ ದೊಡ್ಡ ವ್ಯತ್ಯಾಸ ಉಂಟುಮಾಡಬಹುದು ಎಂದು ತೋರಿಸಿದ್ದು, ಮುಂದಿನ ಪೀಳಿಗೆಗೆ ಆರೋಗ್ಯಕರ ಮತ್ತು ಹೆಚ್ಚು ಸುಸ್ಥಿರ ಭವಿಷ್ಯದತ್ತ ಕೆಲಸ ಮಾಡಲು ಎಲ್ಲರನ್ನು ಪ್ರೇರೇಪಿಸುತ್ತದೆ ಎಂದರು.

ವಿಜ್ಞಾನ ಕೇಂದ್ರದ ಮಾರ್ಗದರ್ಶಕಿ ಎಂ.ಶುಭ್ರತಾ, ಕೆ.ಶ್ವೇತಾ, ನಯೀಮಾ ಕೌಸರ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.