ಬ್ಯಾಕೊಡು: ಕರೂರು ಹೋಬಳಿಯ ವಿವಿಧ ಕಾಮಗಾರಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೆರವೇರಿಸಿದರು.
ತುಮರಿ ಪೇಟೆ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪ್ರಯತ್ನ ಮಾಡಲಾಗುವುದು ಎಂದರು. ಬೇರಾಳ ಗ್ರಾಮದ ಚಂದ್ರನಾಥ ಸ್ವಾಮಿ ಬಸದಿ ರಸ್ತೆ, ಹಾಳಸಸಿ, ಚದುಕಳಿ ಕಾಲುಸಂಕ ಕಾಮಗಾರಿ, ತುಮ್ಮನಗದ್ದೆ ಊರಿನ ಕಾಲುಸಂಕ, ಕುದರೂರು ಗ್ರಾಮದ ಹಾಳಸಸಿ ರಸ್ತೆ, ಆವಿಗೆ ರಸ್ತೆ, ಎಸ್.ಎಸ್.ಭೋಗ್ ಗ್ರಾಪಂನ ಹೊಸೂರು ಆನೆಗುಂಡಿ ಕಾಲುಸಂಕ ನಿರ್ಮಾಣದ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿದರು.
ಗ್ರಾಪಂ ಅಧ್ಯಕ್ಷೆ ಉಮಾ, ಕೆಡಿಪಿ ಸದಸ್ಯ ಜಿ.ಟಿ.ಸತ್ಯನಾರಾಯಣ, ನಾಮ ನಿರ್ದೇಶಿತ ಸದಸ್ಯ ಗಣೇಶ್, ರವಿ ಅಳೂರು, ರವಿ ಹುರುಳಿ, ದೇವರಾಜ, ಮಂಜು, ಎಸ್.ಎಲ್.ನಾಗರಾಜ ಇತರರಿದ್ದರು.