ಶಿಕಾರಿಪುರದ ಪಶುಆಸ್ಪತ್ರೆಯಲ್ಲಿ ಆಯೋಜಿಸಿದ್ದ ನಾಟಿಕೋಳಿ ಮರಿಗಳ ವಿತರಣಾ ಕಾರ್ಯಕ್ರಮವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಬಸವರಾಜ್, ಹುಲ್ಮಾರ್ ಮಹೇಶ್, ಸುಧೀರ್ ಇತರರಿದ್ದರು.  
ನ್ಯೂಸ್

ಫಲಾನುಭವಿಗಳಿಗೆ ಕೋಳಿ ಮರಿಗಳ ವಿತರಣೆ

ಶಿಕಾರಿಪುರ: ಕರ್ನಾಟಕ ರಾಜ್ಯ ಕುಕ್ಕುಟ ಮಹಾಮಂಡಳ ಹಾಗೂ ತಾಲೂಕು ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಸಹಯೋಗದಲ್ಲಿ ಪಟ್ಟಣದ ಪಶು ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಮೀಣ ರೈತ ಮಹಿಳಾ ಫಲಾನುಭವಿಗಳಿಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ನಾಟಿಕೋಳಿ ಮರಿಗಳು ಹಾಗೂ ಪೂರಕ ಆಹಾರ ಸಾಮಗ್ರಿ ವಿತರಿಸಿದರು.

ಎಸ್‌ಸಿ 5, ಎಸ್‌ಟಿ 32 ಮತ್ತು ಸಾಮಾನ್ಯ ವರ್ಗದ 7 ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು. ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಲ್.ಬಸವರಾಜ್, ಕೃಷಿಕ ಸಮಾಜದ ಅಧ್ಯಕ್ಷ ಹುಲ್ಮಾರ್ ಮಹೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಸುಧೀರ್, ವೀರಣ್ಣ, ಡಾ. ರವಿ, ಮುಖ್ಯ ಪಶು ವೈದ್ಯಾಧಿಕಾರಿ ಡಾ. ಚಂದ್ರಪ್ಪ, ಡಾ. ಜಿ.ಆರ್.ಸಂತೋಷ್ ಇತರರಿದ್ದರು.