ರಿಪ್ಪನ್‌ಪೇಟೆಯ ಹೆದ್ದಾರಿಪುರ ಶಿವರಾಮಕೃಷ್ಣ ಇಂಟರ್‌ನ್ಯಾಷನಲ್ ಸ್ಕೂಲ್‌ನ ಸಾಂಸ್ಕೃತಿಕ ಸಮಾರಂಭವನ್ನು ಮಳಲಿಮಠದ ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಶಿವರಾಮ, ವಿನುತಾ ಇತರರಿದ್ದರು.  
ನ್ಯೂಸ್

ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಅವಶ್ಯ

ರಿಪ್ಪನ್‌ಪೇಟೆ: ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿ ಬಾಲ್ಯದಲ್ಲಿ ಸಿಗುವ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮಳಲಿ ಮಠದ ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಹೆದ್ದಾರಿಪುರದ ಶಿವರಾಮಕೃಷ್ಣ ಇಂಟರ್‌ನ್ಯಾಷನಲ್ ಸ್ಕೂಲ್‌ನ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಾರಂಭ, ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಶಿಕ್ಷಣದ ಜತೆಯಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸುತ್ತಿರುವುದು ಶ್ಲಾಘನೀಯ. ಮಕ್ಕಳು ಗುರುಹಿರಿಯರಿಗೆ ಗೌರವ ನೀಡಬೇಕು ಎಂದು ತಿಳಿಸಿದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಶಾಲೆಗಳಲ್ಲಿ ನೈತಿಕ ಮೌಲ್ಯ ಬೆಳೆಸುವ ಮೂಲಕ ಒಳ್ಳೆಯ ಪ್ರಜೆಗಳನ್ನಾಗಿ ರೂಪಿಸಬೇಕು. ಬುದ್ದಿವಂತರಾಗುವ ಜತೆಯಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸುವ ಸಚ್ಚಾರಿತ್ರೃ ಮನೋಭಾವವೂ ಮುಖ್ಯ ಎಂದರು.

ಶಾಲೆ ಸಂಸ್ಥಾಪಕ ಶಿವರಾಮ, ಗ್ರಾಪಂ ಅಧ್ಯಕ್ಷ ವಿನುತಾ, ಸಚಿನ್ ಗೌಡ, ಬಿಇಒ ಕೃಷ್ಣಮೂರ್ತಿ, ರಮೇಶ, ಮುಖಂಡರಾದ ಬಂಡಿ ರಾಮಚಂದ್ರ, ವಾಸಪ್ಪ ಗೌಡ, ಈಶ್ವರಪ್ಪ ಗೌಡ, ನಾಗರಾಜ, ಚಂದಪ್ಪ ಗೌಡ, ವೆಂಕಟಾಚಲ ಇತರರಿದ್ದರು.