ಭದ್ರಾವತಿಯಲ್ಲಿ ಬಿಜೆಪಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಆಶಾ ಕಾರ್ಯಕರ್ತೆ ರಾಜೇಶ್ವರಿ, ಮಹಿಳಾ ವಾಹನ ಚಾಲಕಿ ರಶ್ಮಿ, ಜ್ಯೋತಿ, ಮಹಾಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು. ಜಿ.ಧರ್ಮಪ್ರಸಾದ್, ಸರಸ್ವತಿ, ಮಂಗಳಾ, ಸುಮಿತ್ರಾ ಇತರರಿದ್ದರು.  
ನ್ಯೂಸ್

ಮಹಿಳಾ ಸಬಲೀಕರಣಕ್ಕೆ ಕೇಂದ್ರದ ಆದ್ಯತೆ

ಭದ್ರಾವತಿ: ಮಹಿಳಾ ಸಬಲೀಕರಣಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ತರ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಸುಲೋಚನಾ ಪ್ರಕಾಶ್ ಹೇಳಿದರು.

ಬಿಜೆಪಿ ಮಂಡಲದಲ್ಲಿ ಮಹಿಳಾ ಮೋರ್ಚಾ ತಾಲೂಕು ಘಟಕದಿಂದ ಏರ್ಪಡಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮಹತ್ತರ ಪಾತ್ರವಹಿಸಿ ಸಾಧನೆಯ ಹಾದಿಯಲ್ಲಿ ಮುನ್ನಡೆಯತ್ತಿದ್ದಾರೆ ಎಂದು ತಿಳಿಸಿದರು.

ಆಶಾ ಕಾರ್ಯಕರ್ತೆ ರಾಜೇಶ್ವರಿ, ಮಹಿಳಾ ವಾಹನ ಚಾಲಕಿ ರಶ್ಮಿ, ಜ್ಯೋತಿ, ಮಹಾಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ಸರಸ್ವತಿ ವಿಜಯ್‌ಕುಮಾರ್, ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಗಳಾ ನಾಗೇಂದ್ರ, ಜಿಲ್ಲಾ ಒಬಿಸಿ ಉಪಾಧ್ಯಕ್ಷೆ ಸುಮಿತ್ರಾ ರಂಗನಾಥ್, ಮಂಡಲ ಉಪಾಧ್ಯಕ್ಷೆ ಗೌರಮ್ಮ, ಒಬಿಸಿ ಮೋರ್ಚಾ ಅಧ್ಯಕ್ಷ ರಾಜಶೇಖರ್, ಮಂಜುಳಾ, ಶಕುಂತಲಾ ಇತರರಿದ್ದರು.