ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜನ್ಮದಿನ ಅಂಗವಾಗಿ ಶಿಕಾರಿಪುರದ ಮಂಗಲ ಭವನದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಎಂ.ಬಿ.ಶಿವಕುಮಾರ್, ಡಾ. ಶಿವಕುಮಾರ್, ಕುಬೇರಪ್ಪ ಇತರರಿದ್ದರು.  
ನ್ಯೂಸ್

ಜೀವ ಉಳಿಸುವ ಶ್ರೇಷ್ಠ ಕಾರ್ಯ ರಕ್ತದಾನ

ಶಿಕಾರಿಪುರ: ರಕ್ತದಾನ ಮಾಡುವುದರಿಂದ ಜೀವ ಉಳಿಸುವ ಶ್ರೇಷ್ಠ ಕಾರ್ಯ ನಮ್ಮಿಂದಾಗುತ್ತದೆ ಎಂದು ಶಿವಮೊಗ್ಗ ರೆಡ್‌ಕ್ರಾಸ್ ಸಂಜೀವಿನಿ ರಕ್ತನಿಧಿ ಕೇಂದ್ರದ ಧರಣೇಂದ್ರ ದಿನಕರ್ ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನದ ಅಂಗವಾಗಿ ಗಂಗಮ್ಮ ವೀರಭದ್ರ ಶಾಸ್ತ್ರಿ ಸ್ಮಾರಕ ಟ್ರಸ್ಟ್, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ, ರೆಡ್‌ಕ್ರಾಸ್ ಸಂಜೀವಿನಿ ರಕ್ತನಿಧಿ ಶಿವಮೊಗ್ಗದ ಆಶ್ರಯದಲ್ಲಿ ಮಂಗಲ ಭವನದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ರಕ್ತದಾನ ಮಾಡುವುದರಿಂದ ಆರೋಗ್ಯಕರ ಜೀವನಶೈಲಿ ನಮ್ಮದಾಗುತ್ತದೆ. ರಕ್ತಪರಿಚಲನೆ ಹೆಚ್ಚಿಸುತ್ತದೆ. ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ. ಒಂದು ಆರೋಗ್ಯಕರ ಪ್ರಕ್ರಿಯೆ. ರಕ್ತದಾನ ಹೃದಯದ ಆರೋಗ್ಯ ಹೆಚ್ಚಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಗೊಳಿಸುತ್ತದೆ. ಹೃದಯ ಕಾಯಿಲೆ, ಪಾರ್ಶ್ವವಾಯು ಅಪಾಯ ಕಡಿಮೆಯಾಗುತ್ತದೆ ಎಂದರು.

ಸಂಸ್ಥೆ ಅಧ್ಯಕ್ಷ ಎಂ.ಬಿ.ಶಿವಕುಮಾರ್, ಆಡಳಿತ ಪ್ರತಿನಿಧಿ ಡಾ. ಶಿವಕುಮಾರ್, ಸಮನ್ವಯ ಅಧಿಕಾರಿ ಕುಬೇರಪ್ಪ, ಮಂಜುನಾಥ್, ಡಾ. ವೀರೇಂದ್ರಗೌಡ, ವಿದ್ಯಾಶಂಕರ್, ಸಿದ್ದೇಶ್ವರ್, ಡಾ. ರವೀಂದ್ರ, ಪ್ರಶಾಂತ್ ಕುಬಸದ್ ಇತರರಿದ್ದರು.