ತೀರ್ಥಹಳ್ಳಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಕಂಡ ಅತ್ಯಂತ ಅಪರೂಪದ ಮತ್ತು ದಕ್ಷ ರಾಜಕಾರಣಿ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಬಿ.ಎಸ್.ಯಡಿಯೂರಪ್ಪ ಜನ್ಮದಿನದ ಅಂಗವಾಗಿ ಬಿಜೆಪಿ ತಾಲೂಕು ಮಂಡಲದಿಂದ ಜೆಸಿ ಆಸ್ಪತ್ರೆ ಒಳರೋಗಿಗಳಿಗೆ ಹಣ್ಣು-ಬ್ರೆಡ್ ವಿತರಿಸಿ ಮಾತನಾಡಿ, ಬಿಎಸ್‌ವೈ ಅವರ ಉತ್ತಮ ಆಡಳಿತದಿಂದ ಸಮಾಜದ ಎಲ್ಲ ವರ್ಗದ ಜನರ ಬದುಕಿಗೆ ಸರ್ಕಾರದ ನೆರವು ತಲುಪಿದೆ ಎಂದು ತಿಳಿಸಿದರು.
ಮಂಡಲ ಅಧ್ಯಕ್ಷ ಹೆದ್ದೂರು ನವೀನ್,ಪ್ರಶಾಂತ್ ಕುಕ್ಕೆ, ಹಸಿರುಮನೆ ನಂದನ್, ಸಂತೋಷ್ ದೇವಾಡಿಗ, ರಕ್ಷಿತ್ ಮೇಗರವಳ್ಳಿ, ಪ್ರಮೋದ್, ನಿಖಿಲ್ ಕಾಮತ್ ಇತರರಿದ್ದರು.