ಸೊರಬದ ಕಾನುಕೇರಿ ಮಠದಲ್ಲಿ ಏರ್ಪಡಿಸಿದ್ದ ವಚನ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಗೌರವಿಸಲಾಯಿತು. ಬಂಗಾರಪ್ಪ ಜಡೇಕರ್, ಸೋಮೇಶ್ವರ, ರೇಖಾ ಜಗದೀಶ್ ಇತರರಿದ್ದರು.  
ನ್ಯೂಸ್

ವಚನಕಾರರ ಸಂದೇಶ ಅಳವಡಿಸಿಕೊಳ್ಳಿ

ಸೊರಬ: ಬಸವಾದಿ ಶಿವಶರಣರ ವಚನ ಸಂದೇಶಗಳನ್ನು ಅರಿತುಕೊಂಡು ಬದುಕು ನಡೆಸಬೇಕು ಎಂದು ಪಟ್ಟಣದ ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಕಾನುಕೇರಿ ಮಠದಲ್ಲಿ ಹಮ್ಮಿಕೊಂಡಿದ್ದ ವಚನ ಶ್ರಾವಣ ಸಂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಜೀವನದಲ್ಲಿ ಅಧ್ಯಾಪನ, ಅನುಷ್ಠಾನ, ಅಭ್ಯಾಸಗಳನ್ನು ರೂಢಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ. ಉತ್ತಮ ಆಹಾರ ಸೇವಿಸುವುದರಿಂದ ಉತ್ತಮ ಆರೋಗ್ಯ ಹೊಂದಬಹುದು ಎಂದು ತಿಳಿಸಿದರು.

ಶ್ರೀ ಬಸವಲಿಂಗ ಸ್ವಾಮೀಜಿ, ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಲೆಕ್ಕ ಪರಿಶೋಧಕ ಅಧಿಕಾರಿ ಬಂಗಾರಪ್ಪ ಜಡೇಕರ್, ಸೊರಬ ಆಹಾರ ಸಂರಕ್ಷಣಾಧಿಕಾರಿ ಸೋಮೇಶ್ವರ, ಅಕ್ಕನ ಬಳಗದ ಅಧ್ಯಕ್ಷೆ ರೇಖಾ ಜಗದೀಶ್, ನಿವೃತ್ತ ಶಿಕ್ಷಕ ಚಾಮರಾಜ್, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ನಾಗರಾಜ್ ಜೈನ್, ವಿಶ್ವನಾಥ ಗೌಡ, ಗುರುಮೂರ್ತಿ, ನಾಗರಾಜ್ ಗುತ್ತಿ, ಮಧುರಾಯ್ ಜಿ. ಶೇಟ್, ಶಂಕರ್ ಶೇಟ್, ರೇಣುಕಮ್ಮ ಗೌಳಿ, ಹಾಲೇಶ್ ನವುಲೆ, ಪೂರ್ಣಿಮಾ ಶಿವಯೋಗಿ, ಲತಾ ಮಹೇಶ್ ಇತರರಿದ್ದರು.