ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಕೆ.ಎಚ್.ತೀರ್ಥಯ್ಯ, ಅಣ್ಣಪ್ಪ, ಹನುಮಂತನಾಯ್ಕ, ಸರಸ್ವತಿ ಇತರರಿದ್ದರು.  
ನ್ಯೂಸ್

75 ಜ್ಯೋತಿ ಬೆಳಗಿಸಿ ಆರೋಗ್ಯಕ್ಕೆ ಪ್ರಾರ್ಥನೆ

ಭದ್ರಾವತಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಬಿಜೆಪಿ ಮುಖಂಡರು ರಕ್ತದಾನ ಶಿಬಿರ ಸೇರಿ ವಿವಿಧ ಸಮಾಜಮುಖಿ ಕಾರ್ಯಕ್ರಮ ಆಯೋಜಿಸಿದ್ದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ 75 ಜ್ಯೋತಿ ಬೆಳಗಿಸುವ ಮೂಲಕ ಮೋದಿ ಅವರ ಆರೋಗ್ಯಕ್ಕೆ ಕಾರ್ಯಕರ್ತರು ಪ್ರಾರ್ಥಿಸಿದರು. ಯುವ ಮೋರ್ಚಾದಿಂದ ರಕ್ತದಾನ ಶಿಬಿರ ನಡೆಸಲಾಯಿತು.

ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಮೋದಿ ಅವರು ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಯುವ ಸಮುದಾಯ ಹಾಗೂ ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ ಎಂದರು.

ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಜಿ.ಆನಂದಕುಮಾರ್, ರಘುನಾಥ್ ರಾವ್, ಚನ್ನೇಶ್, ಸುಲೋಚನಾ, ಅನುಪಮಾ ಚನ್ನೇಶ್ ಉಪಸ್ಥಿತರಿದ್ದರು.

ಬಾರಂದೂರಲ್ಲಿ ಆಚರಣೆ: ಪ್ರಧಾನಿ ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ಬಾರಂದೂರು ಮಹಾಶಕ್ತಿ ಕೇಂದ್ರದಿಂದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದರು. ಸೇವಾ ಪಾಕ್ಷಿಕ ಕಾರ್ಯಕ್ರಮದ ಜಿಲ್ಲಾ ಸಹಸಂಚಾಲಕ ಸೋಮಶೇಖರ್ ಹಾಗೂ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್.ತೀರ್ಥಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಮುಖರಾದ ಅಣ್ಣಪ್ಪ, ಹನುಮಂತ ನಾಯ್ಕ, ರವಿಕುಮಾರ್, ಶಿವಮೂರ್ತಿ, ನಿರಂಜನ್, ಪ್ರಸನ್ನಕುಮಾರ್, ಭರತ್, ಸರಸ್ವತಿ, ಶಕುಂತಲಾ, ಪದ್ಮಪ್ರಿಯಾ, ಜೈಶೀಲಾ, ಪುರುಷೋತ್ತಮ್ ಇತರರಿದ್ದರು.