ನ್ಯೂಸ್

ಪ್ರಭಾಸ್​ ನಂತರ ಮತ್ತೊಬ್ಬ ಸ್ಟಾರ್​ ನಟನ ಸೈ-ಫೈ ಸಿನಿಮಾ ರಿಲೀಸ್​ಗೆ ಸಜ್ಜು! ರಿವೀಲ್​ ಆಯ್ತು ಚಿತ್ರದ ರನ್​ಟೈಮ್​

ಆಂಧ್ರಪ್ರದೇಶ: ರೆಬೆಲ್ ಸ್ಟಾರ್, ನಟ ಪ್ರಭಾಸ್​ ಮತ್ತು ನಾಗ್​ ಅಶ್ವಿನ್ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ಸೈನ್ಸ್​-ಫಿಕ್ಷನ್​ ಸಿನಿಮಾ ಸದ್ಯ ಟಾಲಿವುಡ್​ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಮಧ್ಯೆ ಮತ್ತೊಬ್ಬ ಸ್ಟಾರ್​ ನಟನ ಚಿತ್ರವು ಸೈ-ಫೈ ಆಗಿದ್ದು, ಸದ್ದಿಲ್ಲದೇ ತನ್ನೆಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಇದೀಗ ರಿಲೀಸ್​ನತ್ತ ಮುಖಮಾಡಿದೆ. ಅಷ್ಟಕ್ಕೂ ಯಾರು ಆ ನಟ? ಯಾವ ಚಿತ್ರವಿದು? ಎಂಬುದರ ಮಾಹಿತಿ ಹೀಗಿದೆ ನೋಡಿ.

ತೆಲುಗು ಚಿತ್ರನಟ ಶಿವ ಕಾರ್ತಿಕೇಯನ್ ಅಭಿನಯದ ಹಾಗೂ ಆರ್. ರವಿಕುಮಾರ್​ ನಿರ್ದೇಶನದ ಸೈ-ಫೈ, ಥ್ರಿಲ್ಲರ್ ಜಾನರ್ ಒಳಗೊಂಡ 'ಅಯಾಲನ್' ಇದೀಗ ಬಿಡುಗಡೆಗೆ ಸಿದ್ಧಗೊಂಡಿದೆ. ಚಿತ್ರತಂಡ ಈ ಹಿಂದೆಯೇ ನಿಗದಿಪಡಿಸಿದಂತೆ ಕಳೆದ ವರ್ಷ ದೀಪಾವಳಿ ಹಬ್ಬಕ್ಕೆ ಸಿನಿಮಾ ತೆರೆ ಕಾಣಬೇಕಿತ್ತು. ಆದ್ರೆ, ಬಾಕಿ ಉಳಿದಿದ್ದ ಗ್ರಾಫಿಕ್ಸ್ (CGI) ಕೆಲಸಗಳಿಂದಾಗಿ ಚಿತ್ರವನ್ನು ಪದೇ ಪದೇ ಮುಂದೂಡಲಾಯಿತು. ಇದೀಗ 2024ಕ್ಕೆ ಅಧಿಕೃತವಾಗಿ ರಿಲೀಸ್ ಆಗಲಿದೆ ಎಂದು ಚಿತ್ರ ತಯಾರಕರು ತಿಳಿಸಿದ್ದಾರೆ.

ಈ ಚಿತ್ರವು ಮಹೇಶ್ ಬಾಬು ನಟನೆಯ 'ಗುಂಟೂರು ಕಾರಂ' ಚಿತ್ರದ ಜತೆ ಬಾಕ್ಸ್​ ಆಫೀಸ್​ನಲ್ಲಿ ಎದುರು ನೋಡಲಿದೆ ಎಂದು ಹೇಳಲಾಗಿದ್ದು,

ಸಿನಿಮಾದ ಅಧಿಕೃತ ರನ್ ಟೈಮ್​ ಇದೀಗ ಹೊರಬಿದ್ದಿದೆ. ಮಾಹಿತಿಯ ಪ್ರಕಾರ, ಸಿನಿಮಾ 155 ನಿಮಿಷಗಳ (2 ಗಂಟೆ 35 ನಿಮಿಷ) ರನ್​ಟೈಮ್​ ಅನ್ನು ಹೊಂದಿದೆ.

ಈ ಚಿತ್ರದಲ್ಲಿ ಶಿವ ಕಾರ್ತಿಕೆಯನ್​ಗೆ ನಾಯಕಿಯಾಗಿ ನಟಿ ರಾಕುಲ್ ಪ್ರೀತ್ ಸಿಂಗ್ ಕಾಣಿಸಿಕೊಂಡರೆ, ಶರದ್ ಕೇಳ್ಕರ್, ಇಶಾ ಕೊಪ್ಪಿಕರ್, ಭಾನು ಪ್ರಿಯಾ, ಯೋಗಿ ಬಾಬು ಮುಂತಾದವರ ತಾರಾಗಣವಿದೆ. ಚಿತ್ರಕ್ಕೆ ಎ.ಆರ್ ರೆಹಮಾನ್ ಸಂಗೀತವಿದ್ದು, ಕೆಜೆಆರ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕೋಟಪಾಡಿ ಜೆ. ರಾಜೇಶ್ ನಿರ್ಮಿಸಿದ್ದಾರೆ,(ಏಜೆನ್ಸೀಸ್).