ನ್ಯೂಸ್

ಶಿವಾಜಿನಗರ ಮಹಿಳಾ ಠಾಣೆಯ ಇನ್ಸ್​ಪೆಕ್ಟರ್​​ ಸುಮಾ ಸಸ್ಪೆಂಡ್: ಕಾರಣ ಹೀಗಿದೆ…​

ಬೆಂಗಳೂರು: ಕರ್ತವ್ಯ ಲೋಪ ಹಾಗೂ ಭ್ರಷ್ಟಾಚಾರ ಆರೋಪದಡಿಯಲ್ಲಿ ಶಿವಾಜಿನಗರ ಮಹಿಳಾ ಪೊಲೀಸ್​ ಠಾಣೆಯ ಇನ್ಸ್​ಪೆಕ್ಟರ್ ಸಸ್ಪೆಂಡ್​ ಆಗಿದ್ದಾರೆ.

ಸುಮಾ ಅಮಾನತಾದ ಸಬ್​ಇನ್ಸ್​ಪೆಕ್ಟರ್​. ಬೆಂಗಳೂರು ನಗರದ ನೂತನ ಪೊಲೀಸ್​ ಆಯುಕ್ತ ದಯಾನಂದ್​ ಅವರು ಸುಮಾ ಅವರನ್ನು ಸಸ್ಪೆಂಡ್​ ಮಾಡಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ನಟಿಗೆ ಖಾಸಗಿ ಅಂಗ ಪ್ರದರ್ಶನ: ಜೈಲಿನಿಂದ ಬಿಡುಗಡೆಯಾದ ಆರೋಪಿಗೆ ಅದ್ಧೂರಿ ಸ್ವಾಗತ!

ಲೋಕಾಯುಕ್ತ ದಾಳಿ

ಕೆಲ ದಿನಗಳ ಹಿಂದೆ ಶಿವಾಜಿನಗರ ಮಹಿಳಾ ಠಾಣೆಯ ಮೇಲೆ ಲೋಕಾಯುಕ್ತ ದಾಳಿ ಸಹ ನಡೆದಿತ್ತು. ಸಬ್​ ಇನ್ಸ್​ಪೆಕ್ಟರ್ ಸವಿತಾ ಅವರು 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟು, ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದರು. ಈ ಪ್ರಕರಣದಲ್ಲೂ ಇನ್ಸ್​ಪೆಕ್ಟರ್ ಸುಮಾ ಅವರ ಹೆಸರು ಕೇಳಿಬಂದಿತ್ತು.

ಹಣ ಕೊಟ್ಟರೆ ಮಾತ್ರ ಕೆಲಸ

ಇದಿಷ್ಟೇ ಅಲ್ಲದೆ, ಹಿರಿಯ ಅಧಿಕಾರಿಗಳ ಜತೆ ದುರ್ವತನೆ ತೋರಿರುವ ಆರೋಪವೂ ಸುಮಾ ಮೇಲಿದೆ. ಹಿರಿಯ ಅಧಿಕಾರಿಗಳು ಹೇಳಿ ಕಳುಹಿಸಿದ ಪ್ರಕರಣದಲ್ಲೂ ಲಂಚಕ್ಕೆ ಬೇಡಿಕೆ ಇಡುತ್ತಿದ್ದರಂತೆ. ಯಾವ ಅಧಿಕಾರಿ ಕಳುಹಿಸಿದರೂ ಹಣ ಕೊಟ್ಟರೆ ಮಾತ್ರ ಕೆಲಸ ಎಂದು ಸುಮಾ ಹೇಳುತ್ತಿದ್ದರು ಎಂಬ ಆರೋಪವಿದೆ. ಇದನ್ನೂ ಓದಿ: ಒಡಿಶಾ ರೈಲು ದುರಂತ: ಟ್ವೀಟ್​ ಮೂಲಕ ಆಕ್ರೋಶ ಹೊರಹಾಕಿದ ನಟಿ ಪ್ರಿಯಾ ಆನಂದ್!​

ಹೀಗೆ ಹಲವು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಹಿಂದೆಯೇ ಡಿಸಿಪಿ ಭೀಮಾಶಂಕರ್ ಗುಳೇದ್ ಅವರು ಎಚ್ಚರಿಕೆ ನೀಡಿದ್ದರು. ಆದರೂ ತಮ್ಮ ವರಸೆಯನ್ನು ಸುಮಾ ಅವರು ಬದಲಿಸಿರಲಿಲ್ಲ. ಹೀಗಾಗಿ ಲಂಚಕ್ಕೆ ಬೇಡಿಕೆ ಮತ್ತು ಸ್ವೀಕಾರ, ಕರ್ತವ್ಯ ಲೋಪ ಹಾಗೂ ದುರ್ವತನೆ ಆರೋಪಗಳ ಮೇಲೆ ಸುಮಾ ಅವರನ್ನು ಪೊಲೀಸ್​ ಆಯುಕ್ತರು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)