Shiva Rajkumar 
ನ್ಯೂಸ್

ಕಾಲಿವುಡ್​ನಲ್ಲಿ ಶಿವಣ್ಣ ಹವಾ; 'ಟೂರಿಸ್ಟ್​ ಪ್ಯಾಮಿಲಿ' ನಿರ್ದೇಶಕನಿಗೆ ತಂದೆಯಾಗಿ ನಟಿಸಲಿರುವ ಹ್ಯಾಟ್ರಿಕ್​ ಹೀರೋ..Shiva Rajkumar

ಪ್ರಮುಖ ಮುಖ್ಯಾಂಶಗಳು

  • ಜೈಲರ್, ಕ್ಯಾಪ್ಟನ್​ ಮಿಲ್ಲರ್ ನಂತ್ರ ಕಾಲಿವುಡ್​ನಲ್ಲಿ ಹ್ಯಾಟ್ರಿಕ್​ ಹೀರೋ ಶಿವಣ್ಣನದ್ದೇ ಹವಾ
  • ಟೂರಿಸ್ಟ್​ ಫ್ಯಾಮಿಲಿ ಖ್ಯಾತಿಯ ನಿರ್ದೇಶಕನಿಗೆ ತಂದೆಯಾಗಿ ನಟಿಸಲಿರುವ ಶಿವಣ್ಣ
  • ಹೊಸ ನಿರ್ದೇಶಕ ಗೌತಮ್​​ ಶಿವರಾಮನ್​ ಸಿನಿಮಾದಲ್ಲಿ ಶಿವಣ್ಣ ನಟನೆ
Shiva Rajkumar: ಪೆದ್ದಿ ಸಿನಿಮಾದ ಮೂಲಕ ಖದರ್​ ಆಗಿ ಮುಂಚಿದ್ದ  ಹ್ಯಾಟ್ರಿಕ್ ಹೀರೊ ಶಿವರಾಜ್​ ಕುಮಾರ್​ ಅವರಿಗೆ, ಈಗ ತಮಿಳಿನಲ್ಲಿಯೂ ಸಾಕಷ್ಟು ಬೇಡಿಕೆ ಕೇಳಿಬರುತ್ತಿದೆ. ಟೂರಿಸ್ಟ್​ ಫ್ಯಾಮಿಲಿ, ವಿತ್​​ ಲವ್​ ಸಿನಿಮಾ ಮಾಡಿದ್ದ 27 ವರ್ಷದ ಕಿರಿಯ ನಿರ್ದೇಶಕ-ನಟ ಅಭಿಷನ್ ಜೀವಿಂತ್​ ನಟನೆಯ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಶಶಿಕುಮಾರ್​ ಮತ್ತು ಸಿಮ್ರಾನ್​ ನಟನೆಯ ಟೂರಿಸ್ಟ್​ ಫ್ಯಾಮಿಲಿ ಸಿನಿಮಾ ಭಾರಿ ಸದ್ದು ಮಾಡಿತ್ತು. ಹಾಸ್ಯದೊಂದಿಗೆ ಗಂಭೀರ ವಿಚಾರವನ್ನು ಪರದೆ ಮೇಲೆ ತಂದು ನಿರ್ದೇಶಕನಾಗಿ ಅಭಿಷನ್​ ಜೀವಂತ್​ ಸೈ ಎನಿಸಿಕೊಂಡಿದ್ದರು.  ಸದ್ಯ ಸ್ಯಾಂಡಲ್​ವುಡ್​​​ನ ಬಿಗ್​ಸ್ಟಾರ್ ಡಾ. ಶಿವರಾಜ್​ ಕುಮಾರ್​ ಅವರ​ ಜೊತೆಗೆ ನಟನಾಗಿ ಪರದೆ ಹಂಚಿಕೊಳ್ಳುತ್ತಿರುವುದು ಮತ್ತೊಂದು ಮೈಲಿಗಲ್ಲು ಎಂದು ಹೇಳಲಾಗುತ್ತಿದೆ. 

ಟೂರಿಸ್ಟ್​  ಫ್ಯಾಮಿಲಿಯಲ್ಲಿ ಸಹ ನಿರ್ದೇಶಕ

ವಿಕಟನ್​ ಕನೆಕ್ಟ್  ವರದಿಯ ಪ್ರಕಾರ, ಶಿವಣ್ಣ ಮತ್ತು ನಿರ್ದೇಶಕ-ನಟ ಅಭಿಷನ್ ಜೀವಿಂತ್​ ನಟನೆಯ ಸಿನಿಮಾವನ್ನು  ಗೌತಮ್​​ ಶಿವರಾಮನ್​ ಎನ್ನುವವರು ನಿರ್ದೇಶಿಸುತ್ತಿದ್ದಾರೆ. ಗೌತಮ್ ಅವರು ಈ ಮುನ್ನ ಅಭಿಶನ್ ಜೀವಂತ್ ನಿರ್ದೇಶನದ ಸೂಪರ್ ಹಿಟ್ 'ಟೂರಿಸ್ಟ್ ಫ್ಯಾಮಿಲಿ'  ಚಿತ್ರದಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು. ಡ್ರಾಮಾ ಕಂಪನಿ ಬ್ಯಾನರ್​ನಡಿ ಈ ಸಿನಿಮಾ ಬರಲಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಬರ್ತಡೇ ವಿಶಸ್​ ಮಾಡಿದ ಶಿವಣ್ಣ

ಟೂರಿಸ್ಟ್​ ಕುಟುಂಬ ಖ್ಯಾತಿಯ ನಿರ್ದೇಶಕ ಅಭಿಷನ್ ಜೀವಿಂತ್ ಅವರಿಗೆ ಹುಟ್ಟುಹಬ್ಬದ ಶುಭಾಷಯ. ನೀವು ದೂರ ಸಾಗುವ ಅಪರೂಪದ ಪ್ರತಿಭೆಗಳಲ್ಲಿ ಒಬ್ಬರು, ನಿಮ್ಮ ಜೊತೆ ನಟಿಸುವುದು ನಿಜಕ್ಕೂ ಅರ್ಥಪೂರ್ಣ. ನೀವು ಯಾವಾಗಲೂ ಸಂತೋಷವಾಗಿರಿ ಎಂದು ಹಾರೈಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ತಂದೆಯಾಗಿ ನಟನೆ

ಶಿವಣ್ಣ ಮತ್ತು ಅಭಿಷನ್ ಜೀವಿಂತ್​  ನಟನೆಯ ಸಿನಿಮಾವು ತಂದೆ ಮಗನ ಪಾತ್ರವನ್ನು ಕೇಂದ್ರೀಕರಿಸುತ್ತದೆ. ಶಿವಣ್ಣ ಅಭಿಷನ್ ಜೀವಿಂತ್​  ತಂದೆಯಾಗಿ ನಟಿಸಲಿದ್ದಾರೆ. ಹ್ಯಾಟ್ರಿಕ್​ ಹೀರೋನ ನಾಲ್ಕನೇ ತಮಿಳು ಸಿನಿಮಾ ಇದಾಗಿದೆ. ತಮಿಳು ಹಾಗೂ ಕನ್ನಡ ಪ್ರೇಕ್ಷಕರು ಸೇರಿದಂತೆ ಎಲ್ಲ ಭಾಷೆಯ ವೀಕ್ಷಕರಿಗೆ ಈ ಕತೆಯನ್ನು ತಲುಪಿಸುವ ಎಂದು ಹೇಳಲಾಗಿದೆ. 

4ನೇ ಸಿನಿಮಾ

 ಶಿವಾನಿ ನಾಗರಂ ಮತ್ತು ಯೋಗಲಕ್ಷ್ಮಿ ನಾಯಕ ನಟಿಯರಾಗಿ ಬಣ್ಣ ಹಚ್ಚಿದ್ದಾರೆ, ಗಾನ ವಿನೋದ್​,  ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಲಿಯೋನಿ ಜೇಮ್ಸ್​ ಅವರ ಸಂಗೀತದಲ್ಲಿ ಸಿನಿಮಾ ಮೂಡಿಬರಲಿದೆ. ಕ್ಯಾಪ್ಟನ್​ ಮಿಲ್ಲರ್​, ಜೈಲರ್​  ಹಾಗೂ ಜೈಲರ್​​-2 ನಂತರ ತಮಿಳು ಸಿನಿಮಾ ರಂಗದಲ್ಲಿ ಶಿವರಾಜ್​ ಕುಮಾರ್​​ರ 4ನೇ ಸಿನಿಮಾ ಇದಾಗಿದೆ. ಈ ಮೂಲಕ  ಹ್ಯಾಟ್ರಿಕ್​ ಹೀರೋ ಹವಾ ಸ್ಯಾಂಡಲ್​ವುಡ್​, ಟಾಲಿವುಡ್​ನಲ್ಲಿ ಮಾತ್ರವಲ್ಲ ಕಾಲಿವುಡ್​ನಲ್ಲಿಯೂ ಮುಂದುವರೆದಿದೆ, (ಏಜೆನ್ಸೀಸ್).