ನ್ಯೂಸ್

ಶಿರಾಡಿ ಘಾಟ್ ರಸ್ತೆ;ಸಿಎಂ ನೇತೃತ್ವದಲ್ಲಿ ಸಭೆ

Bengaluru - Political - Shivananda Tagadur


ಬೆಂಗಳೂರು:
ಮಂಗಳೂರು ಸೇರಿದಂತೆ ಕರಾವಳಿ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ ಸೇರಿ 7 ಘಾಟ್‌ಗಳ ರಸ್ತೆ ಅಭಿವೃದ್ಧಿಗೆ ಸಿಎಂ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲು ಕ್ರಮ ವಹಿಸುವುದಾಗಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಮೇಲ್ಮನೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿಯ ಪ್ರತಾಪ ಸಿಂಹ ನಾಯಕ್ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು,
7 ಘಾಟಿ ರಸ್ತೆಯಲ್ಲಿ 5 ರಾಷ್ಟ್ರೀಯ ಹೆದ್ದಾರಿಗೆ, ಇನ್ನೆರಡು ರಾಜ್ಯಕ್ಕೆ ಸೇರುತ್ತವೆ ಎಂದರು.
ಈ ರಸ್ತೆಯಲ್ಲಿ ಓಡಾಡಲು ಆತಂಕ ಸೃಷ್ಟಿಸಿದೆ, ಶಿರೂರಿನ ರೀತಿ ಗುಡ್ಡ ಕುಸಿತ ಭೀತಿ ಇದೆ. ಹೀಗಾಗಿ ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಿ ಒಂದು ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ಬಾರಿ ಹೆಚ್ಚಿನ ಮಳೆಯಾದ್ದರಿಂದ ಈ ಸಮಸ್ಯೆಯಾಗಿದೆ. ಕೇಂದ್ರ ಸರ್ಕಾರಕ್ಕೆ ನಾವು ಪ್ರಸ್ತಾವನೆ ಮಾಡಬಹುದು ಎಂದರು.
ಕರಾವಳಿಗೆ ಸಂಪರ್ಕ ಕೊಂಡಿಯಾಗಿರುವ ಘಾಟಿ ಪರಿಸರದಲ್ಲಿನ ಹೆದ್ದಾರಿಯಲ್ಲಿ ಹೆಚ್ಚು ಮಳೆಯಿಂದಾಗಿ ರಸ್ತೆ ಕುಸಿತದಿಂದ ಸಂಚಾರ ವ್ಯತ್ಯಯ ಉಂಟಾಗುತ್ತಿದೆ ಎಂದು ನಾಯಕ್ ಗಮನ ಸೆಳೆದಿದ್ದರು.