ನ್ಯೂಸ್

ಶಿರಾ ಜೆಡಿಎಸ್​ ಶಾಸಕ ಬಿ.ಸತ್ಯನಾರಾಯಣ್​ ನಿಧನ: ಖಚಿತ ಪಡಿಸಿದ ಆಸ್ಪತ್ರೆ

lakshmihegde

ಶಿರಾ ವಿಧಾನಸಭಾ ಕ್ಷೇತ್ರದ ಜೆಡಿಎಸ್​ ಶಾಸಕ ಬಿ.ಸತ್ಯನಾರಾಯಣ್​ ಅವರು ಇಂದು ರಾತ್ರಿ 10.45ರ ಹೊತ್ತಿಗೆ ನಿಧನರಾಗಿದ್ದಾರೆ. ಅವರಿಗೆ 69ವರ್ಷ ವಯಸ್ಸಾಗಿತ್ತು.

ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಸತ್ಯನಾರಾಯಣ್​ ಅವರನ್ನು ಓಲ್ಡ್ ಏರ್​ಪೋರ್ಟ್ ರೋಡ್​​ನಲ್ಲಿರುವ ಮಣಿಪಾಲ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಬೆಳಗ್ಗೆಯೇ ಒಮ್ಮೆ ಸತ್ಯನಾರಾಯಣ್​ ಅವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ ನಂತರ ಅದು ಸುಳ್ಳು ಎಂದು ಹೇಳಲಾಗಿತ್ತು.

ಇದೀಗ ಶಿರಾ ಶಾಸಕರು ಮೃತಪಟ್ಟಿದ್ದನ್ನು ಮಣಿಪಾಲ್ ಆಸ್ಪತ್ರೆಯೇ ಖಚಿತಪಡಿಸಿದೆ. ದೀರ್ಘಕಾಲದ ಪಿತ್ತಜನಕಾಂಗದ ಸಮಸ್ಯೆಯಿಂದ ಬಳಲುತ್ತಿದ್ದರು. ಬಹುಅಂಗಾಂಗ ವೈಫಲ್ಯಕ್ಕೆ ಒಳಗಾದ ಅವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೂ, ಆರೋಗ್ಯ ಸ್ಥಿತಿ ತುಂಬ ಹದಗೆಟ್ಟಿತ್ತು ಎಂದು ಮಣಿಪಾಲ್ ನಿರ್ದೇಶಕ ತಿಳಿಸಿದ್ದಾರೆ.